March 22, 2026

ಕುಟುಂಬ ಸದಸ್ಯ ಹಾಗೂ ಸಿಬ್ಬಂದಿಗೆ ಕೊರೋನಾ ಸೋಂಕು ದೃಢ:
ಪ್ರಿಯಾಂಕ ಗಾಂಧಿ ಐಸೋಲೇಟ್

0
INDIA-POLITICS-AGRICULTURE-CONGRESS-2_1634634809535_1641218141241.jpg

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕುಟುಂಬದ ಸದಸ್ಯರೊಬ್ಬರು ಮತ್ತು ಅವರ ಸಿಬ್ಬಂದಿಯೊಬ್ಬರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಅವರು ತಮ್ಮನ್ನ ತಾವು ಪ್ರತ್ಯೇಕಿಸಿಕೊಂಡಿದ್ದಾರೆ.

ಆದರೆ ಅವರ ಕೊರೊನಾ ಪರೀಕ್ಷೆ ವರದಿ ನೆಗೆಟಿವ್‌ ಆಗಿದೆ. ಟ್ವೀಟ್‌ ಮೂಲಕ ಮಾಹಿತಿ ನೀಡಿದ ಪ್ರೀಯಾಂಕ, ‘ನನ್ನ ಕುಟುಂಬದ ಸದಸ್ಯರೊಬ್ಬರು ಮತ್ತು ನನ್ನ ಸಿಬ್ಬಂದಿಯೊಬ್ಬರು ನಿನ್ನೆ ಕೋವಿಡ್-19ಗೆ ಪಾಸಿಟಿವ್ ಪರೀಕ್ಷೆ ಮಾಡಿದ್ದಾರೆ. ನಾನು ಇಂದು ಪರೀಕ್ಷೆ ಮಾಡಿದ್ದು, ತನಗೆ ನೆಗೆಟಿವ್ ಬಂದಿದೆ. ಆದಾಗ್ಯೂ ನಾನು ಪ್ರತ್ಯೇಕವಾಗಿರಲು ಮತ್ತು ಕೆಲವು ದಿನಗಳ ನಂತರ ಮತ್ತೆ ಪರೀಕ್ಷಿಸಲು ವೈದ್ಯರು ಸಲಹೆ ನೀಡಿದ್ದಾರೆ’ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!