November 20, 2026

ನೇರಳಕಟ್ಟೆ ಲಾರಿ ಡಿಕ್ಕಿ ಹೊಡೆದು ವಿದ್ಯಾರ್ಥಿನಿ ಮೃತಪಟ್ಟ ಹಿನ್ನೆಲೆ: ವಿದ್ಯಾರ್ಥಿನಿ ಮನೆಗೆ ಭೇಟಿ ಕುಟುಂಬಕ್ಕೆ ಸಾಂತ್ವನ ಹೇಳಿದ ಜನಪ್ರಿಯ ಫೌಂಡೇಶನ್ ಚೇಯರ್ ಮ್ಯಾನ್ ಡಾ. ಅಬ್ದುಲ್ ಬಶೀರ್ ವಿ.ಕೆ

0
image_editor_output_image-1692362209-1795174403746

ವಿಟ್ಲ: ವಿಟ್ಲ ಸಮೀಪದ ನೇರಳಕಟ್ಟೆ ಎಂಬಲ್ಲಿ ಅಪಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ ಫಾತಿಮಾ ಇಝಾಹಾ ಇಲ್ಯಾಸ್ ಅವರ ಮನೆಗೆ ಜನಪ್ರಿಯ ಫೌಂಡೇಶನ್ ಇದರ ಚೇಯರ್ ಮ್ಯಾಮ್ ಡಾ. ಅಬ್ದುಲ್ ಬಶೀರ್ ವಿ.ಕೆ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಫಾತಿಮಾ ಇಝಾಹಾ ಜನಪ್ರಿಯ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾಳೆ. ಈಕೆಯ ಮರಣ ಸುದ್ದಿ ತಿಳಿಯುತ್ತಿದ್ದಂತೆ ಜನಪ್ರಿಯ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ವರ್ಗದವರು, ಶಿಕ್ಷಕರು ಭೇಟಿ ನೀಡಿ, ರಾತ್ರಿ ವರೆಗೂ ಅಲ್ಲಿದ್ದರು. ಜನಪ್ರಿಯ ಸಮೂಹ ಸಂಸ್ಥೆಗಳ ಚೇಯರ್ ಮ್ಯಾನ್ ಡಾ. ಅಬ್ದುಲ್ ಬಶೀರ್ ಅವರು ಇಂದು ಹಾಸನದಿಂದ ಬಂದು ಮನೆಮಂದಿ ಸಾಂತ್ವಾನ ಹೇಳಿದ್ದು, ಅಲ್ಲದೇ ಆಕೆಯ ಕಬರ್ ಸ್ತಾನಕ್ಕೆ ತೆರಳಿ ದುವಾಃ ನೆರವೇರಿಸಿದರು.

ಈ ಸಂದರ್ಭ ಸಾಮಾಜಿಕ ಕಾರ್ಯಕರ್ತ ಶಾಕೀರ್ ಅಳಕೆಮಜಲು, ಜನಪ್ರಿಯ ಗಾರ್ಡನ್ ನ ಇಚ್ಚಾಲಿ ಹಾಜಿ,  ಶಾಲಾ ಪ್ರಾಂಶುಪಾಲ ಲಿಬಿನ್ ಝೇವಿಯರ್, ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಇದ್ದರು.

Leave a Reply

Your email address will not be published. Required fields are marked *

You may have missed

error: Content is protected !!