ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ ಇದಿನಬ್ಬ ಮನೆಗೆ ಮತ್ತೆ ಎನ್ ಐ ಎ ದಾಳಿ: ಪತ್ನಿಯ ವಿಚಾರಣೆ
ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆಗೆ ಮತ್ತೆ ಎನ್ ಐಎ ದಾಳಿ ನಡೆಸಿದೆ. ಪತ್ನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯ ಮನೆಯಲ್ಲಿ ಈ ದಾಳಿ ನಡೆದಿದೆ. ಎನ್ ಐ ಎ ತಂಡ ಟೆಂಪೋ ಟ್ರಾವೆಲರ್ ವಾಹನದಲ್ಲಿ ಆಗಮಿಸಿದೆ
ಬಿ ಎಂ ಬಾಷಾ ಅವರ ಪುತ್ರ ಪತ್ನಿಯ ಮೇಲೆ ಇರುವ ಸಂಶಯದಿಂದ ಈ ದಾಳಿ ಆಗಿದೆ. ದೀಪ್ತಿ ಮರಿಯಂ ಮೇಲೆ ಎನ್ ಐ ಎ ಅಧಿಕಾರಿಗಳಿಗೆ ಸಂಶಯವಿದ್ದು, ಈ ಹಿನ್ನೆಲೆಯಲ್ಲಿ ಇಂದು ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ದೀಪ್ತಿ ಮರಿಯಂ ಮೂಲತ ಹಿಂದೂವಾಗಿದ್ದು, ಈತನನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆಯಾಗಿದ್ದಳು. ಇದೀಗ ಈಕೆಯ ಮೇಲೆ ಸಂಶಯಪಟ್ಟು ಎನ್‌ಐ ಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಮರಿಯಂ ಅವರನ್ನೂ ಸುದೀರ್ಘ ವಿಚಾರಣೆ ನಡೆಸಿ ಸಂಜೆ ಮರಿಯಂ ಅವರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.




