ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ: ವಿಟ್ಲದ ಅಬ್ದುಲ್ ನಿಹಾದ್ ಪೊನ್ನೋಟ್ಟು ಪ್ರಥಮ ಸ್ಥಾನ
ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಗಾರ್‌ನ ಅಬ್ದುಲ್ ನಿಹಾದ್ ಪೊನ್ನೋಟ್ (21) ಅವರು ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.ಐರನ್ ಟೆಂಪಲ್ ಸೇವಾ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಲಾದ ‘ಐರನ್ ಟೆಂಪಲ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ’ ಅಕ್ಟೋಬರ್ 25ರಂದು ಅಲಂಗಾರ್‌ನ ದೀನದಯಾಳು ರೈತ ಸಭಾಭವನದಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ಅಬ್ದುಲ್ ನಿಹಾದ್ ಅವರು ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಪ್ರಮಾಣಪತ್ರ ಪಡೆದರು.
ವಿಟ್ಲದ ಪೊನ್ನೂಟ್ಟು ನಿವಾಸಿಗಳಾದ ಆಯಿಷಾ ಪೊನ್ನೋಟ್ ಮತ್ತು ಮೊಹಮ್ಮದ್ ಪೊನ್ನೋಟ್ ದಂಪತಿಯ ಪುತ್ರರಾಗಿರುವ ನಿಹಾದ್ ಅವರ ಈ ಸಾಧನೆ ಗಮನ ಸೆಳೆದಿದೆ.




