ಅ. 26 ನಾಳೆ: ವಿಟ್ಲದಲ್ಲಿ ‘ಲೈಫ್ ಕೇರ್ ಮೆಡಿಕಲ್ಸ್’ ಉದ್ಘಾಟನೆ
ವಿಟ್ಲ: ವಿಟ್ಲ ಜಂಕ್ಷನ್‌ನಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಲೈಫ್ ಕೇರ್ ಮೆಡಿಕಲ್ಸ್ ಔಷಧ ಮಳಿಗೆಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 26ರ ಸೋಮವಾರ ಬೆಳಿಗ್ಗೆ 9.30ಕ್ಕೆ ನಡೆಯಲಿದೆ.
ಕುಂಬೋಲ್ ಸಯ್ಯಿದ್ ಮುಖ್ತಾರ್ ತಂಙಳ್ ಅವರು ದುಆ ನೆರವೇರಿಸಿ ಔಷಧ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಮತ್ತು ಹಾಸನದ ಜನಪ್ರಿಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಆ್ಯಂಡ್ ಹಾಸ್ಪಿಟಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಾರುಖ್ ಅಬ್ದುಲ್ಲಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಗ್ರಾಹಕರಿಗೆ ಗುಣಮಟ್ಟದ ಔಷಧ ಸೇವೆ ಹಾಗೂ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಆರಂಭಗೊಳ್ಳುತ್ತಿರುವ ಈ ನೂತನ ಔಷಧ ಮಳಿಗೆಯ ಉದ್ಘಾಟನಾ ಸಮಾರಂಭಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶುಭ ಹಾರೈಸುವಂತೆ ಸಂಸ್ಥೆಯ ವತಿಯಿಂದ ವಿನಂತಿಸಲಾಗಿದೆ.




