ಮಂಗಳೂರು: ಜನಪ್ರಿಯ ಸಮೂಹ ಸಂಸ್ಥೆ ಮಂಗಳೂರು ಇದರ ಪಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸ್ ವಿಭಾಗಗಳ ORIENTATION ಕಾರ್ಯಕ್ರಮ
ಮಂಗಳೂರು: ಜನಪ್ರಿಯ ಸಮೂಹ ಸಂಸ್ಥೆ ಮಂಗಳೂರು ಇದರ ಪಿಸಿಯೋಥೆರಪಿ, ಅಲೈಡ್ ಹೆಲ್ತ್ ಸೈನ್ಸ್ ವಿಭಾಗಗಳ ORIENTATION ಕಾರ್ಯಕ್ರಮ ಮಂಗಳೂರಿನ ಪಡೀಲ್ ನ ಜನಪ್ರಿಯ ಆಸ್ಪತ್ರೆಯಲ್ಲಿ ನಡೆಯಿತು.

ತರಬೇತುದಾರ ರಫೀಕ್ ಮಾಸ್ತರ್ ಅವರು ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ ಯಶಸ್ಸು ಜೀವನದ ಗುರಿಯಲ್ಲ. ಜೀವನದಲ್ಲಿ ಮೌಲ್ಯ ಎಂಬುದು ಗುರಿಯಾಗಿರಬೇಕು. ವೈದ್ಯಾಕೀಯ ಸೇವೆ ವೃತ್ತಿಯಲ್ಲ. ಅದು ಉತ್ಸಾಹ ಆಗಿರಬೇಕು ಎಂದು ಹೇಳಿದರು.
ಜನಪ್ರಿಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಶಾರೂಖ್ ಅಬ್ದುಲ್ಲ ಮಾತನಾಡಿ ನಿರಂತರ ಪರಿಶ್ರಮದಿಂದ ಮುನ್ನಡೆದಾಗ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ. ಜನಪ್ರಿಯ ಸಂಸ್ಥೆಯಿಂದ ಪ್ರತಿಯೊಬ್ಬರಿಗೂ ಜೀವನದ ದಾರಿ ತೋರಿಸುವ ಕೆಲಸ ಮಾಡುತ್ತಿದೆ ಎಂದರು.
ಪಿಸಿಯೋಥೆರಪಿ ಸಿಟಿ ಕಾಲೇಜ್ ಪ್ರಾಂಶುಪಾಲ ಡಾ.ಅಮರ್ ಪ್ರಸಾದ್, ಜನಪ್ರಿಯ ಫೌಂಡೇಶನ್ ಉಪಾಧ್ಯಕ್ಷೆ ಡಾ. ನಸ್ರೀನಾ ಅಬ್ದುಲ್ ಬಶೀರ್, ಜನಪ್ರಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಿಇಓ ಡಾ. ಕಿರಾಸ್ ಪರ್ತಿಪ್ಪಾಡಿ, ಡಾ. ಜೆಸ್ಮಿ ಶಾರೂಖ್ ಅಬ್ದುಲ್ಲ, ಜನಪ್ರಿಯ ಸಮೂಹ ಸಂಸ್ಥೆಯ ಪ್ರಾಂಶುಪಾಲ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ಕಿಝಾಲ್ ಪರ್ತಿಪ್ಪಾಡಿ, ಜನಪ್ರಿಯ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಅಹಮ್ಮದ್ ಆದೀಲ್, ಜನಪ್ರಿಯ ಸಂಸ್ಥೆಗಳ ಶೈಕ್ಷಣಿಕ ಅಧಿಕಾರಿ ರಾಧಾಕೃಷ್ಣ ಎರುಂಬು ಮೊದಲಾದವರು ಭಾಗವಹಿಸಿದ್ದರು.
ಅರ್ಷಿನ್ ಸ್ವಾಗತಿಸಿದರು. ಡಾ. ಫಾತಿಮಾ ಮುನೀಶಾ ಮತ್ತು ರೈಹಾನಾ ನಿರೂಪಿಸಿದರು. ಹೇಮ ಪ್ರಾರ್ಥಿಸಿದರು. ನಿಕೀತ ವಂದಿಸಿದರು. ಡಾ. ಶಿಫಾನಿ ಜಿಸ್ಮಾನ್ ವರದಿ ವಾಚಿಸಿದರು.




