February 3, 2026

ಮಡಿಕೇರಿ: ಕಾರು-ಬಸ್ ನಡುವೆ ಭೀಕರ ಅಪಘಾತ:
ಮೂವರು ಸ್ಥಳದಲ್ಲೇ ಮೃತ್ಯು-ಐದು ಮಂದಿ ಗಂಭೀರ

0
IMG-20220102-WA0024.jpg

ನಾಗಮಂಗಲ : ಬಸ್ಸು ಹಾಗೂ ಕಾರಿನ ಮಧ್ಯೆ ನಾಗಮಂಗಲ ಸಮೀಪದ ಕೆಂಪನಕೊಪ್ಪಲು ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೊಡಗು ಮೂಲದ ನವ ದಂಪತಿಗಳ ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟ ಹಾಗೂ ಆರು ಮಂದಿ ಗಾಯಗೊಂಡ ಘಟನೆ ಜ. 2 ರಂದು ನಡೆದಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೆಂಪನಕೊಪ್ಪಲು ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ.

ಕಾರಿನಲ್ಲಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕುಂದಳ್ಳಿ ಗ್ರಾಮದ ಸುದೀಪ್(35), ಶ್ರೀಜಾ(30) ಹಾಗೂ ತಂಗಮ್ಮ (55) ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಇನ್ನೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಬಸ್ ಚಾಲಕ ಹಾಗೂ ಬಸ್ ನಲ್ಲಿದ್ದ ಇತರ ನಾಲ್ವರು ಕೂಡ ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!