ಉಪ್ಪಿನಂಗಡಿ: ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
ಉಪ್ಪಿನಂಗಡಿ: ಅಕ್ರಮ ಮರಳು ಸಾಗಾಟ ಕೃತ್ಯಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪಿ.ಸಿ.ಆರ್ ಕ್ರಮಾಂಕ :01/18 ರಲ್ಲಿ ಆರೋಪಿಯಾಗಿ ಸುಮಾರು 2 ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿ, ಹಾಸನ ಬೇಲೂರು ನಿವಾಸಿ ವಿಶ್ವ ಎಂಬಾತನನ್ನು ಉಪ್ಪಿನಂಗಡಿ ಪೆÇಲೀಸರು ಅ 6 ರಂದು ಹಾಸನದಲ್ಲಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಪ್ರವೀಣ್, ಲಿಂಗರಾಜು ಅವರು ಈ ಬಂಧನ ಕಾರ್ಯಾಚರಣೆ ನಡೆಸಿದ್ದಾರೆ.




