October 6, 2026

ವಿಟ್ಲ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ವತಿಯಿಂದ ಜಿಲ್ಲಾ ಮಿಲನೋತ್ಸವ: ಸಂಘದ ಸದಸ್ಯರಿಗೆ ಕ್ರೀಡೋತ್ಸವ-ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ-2 ಸಾವಿರಕ್ಕೂ ಅಧಿಕ ಮಂದಿ ಭಾಗಿ

0
image_editor_output_image252527002-1791298651644

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ವಿಟ್ಲ ಘಟಕದ ಆತಿಥ್ಯದಲ್ಲಿ ಮಂಗಳವಾರ ವಿಟ್ಲ ಬಸವನಗುಡಿ ಜೇಸೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಿಲ್ಲಾ ಮಿಲನೋತ್ಸವ ಕಾರ್ಯಕ್ರಮ ನಡೆಯಿತು.‌

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ವಿಟ್ಲ ಅರಮನೆಯ ಬಂಗಾರು ಅರಸರು ಅವರು
ಸಂಘಟನೆ ಮೂಲಕ ಒಗ್ಗೂಡಿದಾಗ ಸಶಕ್ತರಾಗಲು ಸಾಧ್ಯ. ವೃತ್ತಿ ಕೇವಲ ಸಂಪಾದನೆಗಷ್ಟೇ ದಾರಿಯಾಗದೇ ಸಮಾಜಮುಖಿಯಾದಾಗ ಯಶಸ್ಸು ಅರಸಿ ಹರಸಿ ಬರುತ್ತದೆ. ರಕ್ಷಣೆ ಮತ್ತು
ಭದ್ರತೆ ಒದಗಿಸಿದಾಗ ಸಂಘಟನೆಗಳ ಉದ್ದೇಶ ಅರ್ಥಪೂರ್ಣ ಆಗುತ್ತದೆ.ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಉತ್ತಮ ಕೆಲಸ ಮಾಡುತ್ತಿದೆ. ಸೀಮೆಯ ದೇವರು ಶ್ರೀ ಪಂಚಲಿಂಗೇಶ್ವರ ಎಲ್ಲರಿಗೂ ಒಳಿತು ಮಾಡಲಿ
ಎಂದು ಹೇಳಿದರು.

 

ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ. ವಿಟ್ಲ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಎಲ್ಲಾ ಶಾಮಿಯಾ ಮಾಲಕರ ಸಹಕಾರದಲ್ಲಿ ಸಂಘಟನೆ ಬಲಿಷ್ಠವಾಗಿ ಬೆಳೆದು ನಿಂತಿದೆ. ಮಿಲನೋತ್ಸವ
ಒಬ್ಬನ ಪ್ರಯತ್ನ ಅಲ್ಲ ಇದರ ಹಿಂದೆ ವಿಟ್ಲ ಸಂಘದ ಪದಾಧಿಕಾರಿಗಳ ,ಶಾಮಿಯಾನ ಮಾಲಕರ ಶ್ರಮ ಇದೆ‌. ಮಾಲಕರ ಕಾರ್ಮಿಕರ ಆಶೋತ್ತರ ಈಡೇರಿಕೆಗೆ ಈ ಕಾರ್ಯಕ್ರಮ ಸಹಕಾರಿ ಆಗಲಿದೆ ಎಂದರು‌.

ವಿವಿಧ ಆಟೋಟ ಸ್ಪರ್ಧೆಗಳ ತೀರ್ಪುಗಾರರನ್ನು, ಸಮಾರಂಭಕ್ಕೆ ಸ್ಥಳಾವಕಾಶ ಮಾಡಿಕೊಟ್ಟ ಜೇಸೀ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದವನ್ನು ಗೌರವಿಸಲಾಯಿತು.

ಕಿರುತೆರೆ ಸರಿಗಮ‌ದ ಲಿಟಲ್ ಚಾಂಪಿಯಾನ್ ಅಶ್ಮಿತ್ ಎ. ಜೆ‌. ಅವರನ್ನು ಸನ್ಮಾನಿಸಲಾಯಿತು.ಅನಂತರ ವಿವಿಧ ಕ್ರೀಡಾಸ್ಪರ್ಧೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ವಿಠಲ್ ಜೇಸೀ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಶ್ರೀಧ‌ರ್ ಶೆಟ್ಟಿ,
ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಅಧ್ಯಕ್ಷ
ಎಚ್. ಜಗನ್ನಾಥ ಸಾಲಿಯಾನ್, ದ.ಕ. ಶಾಮಿಯಾನ ಮಾಲಕರ ಸಂಘದ ಮಂಗಳೂರು ಘಟಕದ ಅಧ್ಯಕ್ಷ
ನಿಶಿತ್ ಪೂಜಾರಿ, ಬಂಟ್ವಾಳ ಘಟಕದ ಅಧ್ಯಕ್ಷ
ಐವನ್ ಡಿ’ಸೋಜ, ಮೂಡಬಿದಿರೆ ಘಟಕದ ಅಧ್ಯಕ್ಷ ರಮಾನಾಥ ಸಾಲ್ಯಾನ್, ಬೆಳ್ತಂಗಡಿ‌ ಘಟಕದ ಅಧ್ಯಕ್ಷ ಅರುಣ್ ಮೋರಾಸ್,
ದ.ಕ. ಧ್ವನಿ, ಬೆಳಕು & ಶಾಮಿಯಾನ ಡೆಕೋರೇಶನ್ ಮಾಲಕರ ಸಂಘದ ಕಡಬ ಘಟಕದ ಅಧ್ಯಕ್ಷ
ಉಮೇಶ್ ಮರ್ದಾಳ, ದ.ಕ. ಧ್ವನಿ, ಬೆಳಕು & ಶಾಮಿಯಾನ ಡಕೋರೇಶನ್ ಮಾಲಕರ ಸಂಘ ದ ಪುತ್ತೂರು ಘಟಕದ ಅಧ್ಯಕ್ಷ ಯೋಗೀಶ್ ಕಾವು, ಶಾಮಿಯಾನ ಮಾಲಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಮೂಡುಬಿದಿರೆ,,
ಸುಭಾಶ್ಚಂದ್ರ ಜೈನ್‌ ಬಂಟ್ವಾಳ, ಕ್ಲೆವರ್ ಡಿಸೋಜಾ,
ಅಬ್ದುಲ್ ಲತೀಫ್ ಬೆಳ್ತಂಗಡಿ, ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಬರೆ,
ವಿಟ್ಲ ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಂಕುಡೆ ‌ಕಲ್ಕಾಜೆಗುತ್ತು, ಇಸ್ಮಾಯಿಲ್ ಬನಾರಿ, ರಾಜಶೇಖರ ಶೆಟ್ಟಿ ಕುಡ್ತಮಗೇರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!