ಪೆರುವಾಯಿ: ಅಕ್ರಮವಾಗಿ ಕೋಳಿ ಅಂಕ-ವಿಟ್ಲ ಪೊಲೀಸರ ದಾಳಿ: ನಾಲ್ವರು ಆರೋಪಿಗಳ ಬಂಧನ
ವಿಟ್ಲ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ನಾಲ್ವರನ್ನು ಬಂಧಿಸಿದ ಘಟನೆ ಪೆರುವಾಯಿ ಎಂಬಲ್ಲಿ ನಡೆದಿದೆ.
ದಿನಾಂಕ:02.10.2026 ರಂದು ಮಧ್ಯಾಹ್ನ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಪೆರುವಾಯಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ರಾಮಕೃಷ್ಣ, ಪೊಲೀಸ್ ಉಪನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆರವರಿಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲಿಸಿದಾಗ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಯುತ್ತಿರುವುದು ಧೃಢಪಟ್ಟಿರುತ್ತದೆ. ದಾಳಿ ನಡೆಸಿ ಕೃಷಪ್ಪ (59), ಲಕ್ಷ್ಮಣ ನಾಯ್ಕ್ (38), ಶೋಬಿತ್ ರಾಜ್ (29) ಹಾಗೂ ಯುವರಾಜ್ (46) ಎಂಬವರುಗಳನ್ನು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿದ್ದ ಕೋಳಿಗಳನ್ನು, ಆರೋಪಿಗಳು ಕೋಳಿ ಅಂಕಕ್ಕೆ ಉಪಯೋಗಿಸಿದ ರೂ 3050/- ನಗದು, ಕೋಳಿ ಅಂಕಕ್ಕೆ ಬಳಸುವ ಕತ್ತಿಗಳನ್ನು ಸ್ವಾಧೀನಪಡಿಸಿ, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ,ಕ್ರ: 203/2026, ಕಲಂ: 87, 93 KP Act ಮತ್ತು ಕಲಂ: 3,11 (1)(m)(ii), 11(1)(n) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 ಹಾಗೂ ಕಲಂ: 112 ಬಿ.ಎನ್.ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





