September 30, 2026

ಸುರಿಬೈಲು: ಅ.1 ಮತ್ತು 2ರಂದು  ಅಶ್ ಅರಿಯ್ಯ ಮರ್ಹೂಂ ಶೈಖುನಾ ಸುರಿಬೈಲು ಉಸ್ತಾದ್ 25ನೇ ಆಂಡ್ ನೇರ್ಚೆ ಮತ್ತು ಜಲಾಲಿಯ್ಯ ರಾತೀಬ್ ಮಜ್ಲಿಸ್

0
image_editor_output_image1015498130-1790768485124

ವಿಟ್ಲ: ಬಂಟ್ವಾಳ ತಾಲೂಕಿನ ಸುರಿಬೈಲು ಅಶ್ ಅರಿಯ್ಯ ಮರ್ಹೂಂ ಶೈಖುನಾ ಸುರಿಬೈಲು ಉಸ್ತಾದ್ ಅವರ 25ನೇ ಆಂಡ್ ನೇರ್ಚೆ ಹಾಗೂ ಜಲಾಲಿಯ್ಯ ರಾತೀಬ್ ಮಜ್ಲಿಸ್ ಅಕ್ಟೋಬರ್ 1 ಮತ್ತು 2 ರಂದು ನಡೆಯಲಿದೆ ಎಂದು ಸ್ವಾಗತ ಸಮಿತಿ ಕೋ ಆರ್ಡಿನೇಟರ್ ಹಾಜಿ ಹಮೀದ್ ಕೊಡಂಗಾಯಿ ತಿಳಿಸಿದರು.

ಅವರು ಸಂಸ್ಥೆಯಲ್ಲಿ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿ
ಅಕ್ಟೋಬರ್ 1ರಂದು ಸಂಜೆ 5:30 ಕ್ಕೆ ಧ್ವಜಾರೋಹಣ ಮತ್ತು ಸಂಸ್ಥೆಯ ಅಧ್ಯಕ್ಷ ವಾಲೆಮುಂಡೋವ್ ಉಸ್ತಾದರ ನೇತೃತ್ವದಲ್ಲಿ ಮಖಾಂ ಝಿಯಾರತ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

 

ಸಯ್ಯದ್ ಚಟ್ಟೆಕ್ಕಲ್ ತಂಙಳ್‌ ಮತ್ತು ಹಲವು ಸಯ್ಯಿದರು ಉಲಮಾ ಶಿರೋಮಣಿಗಳು ಸೇರಿ ಜಲಾಲಿಯಾ ರಾತೀಬ್ ಆತ್ಮೀಯ ಮಜ್ಲಿಸ್ ನಡೆಯಲಿದೆ. ನೌಫಲ್ ಸಖಾಫಿ ಕಳಸ ಅವರಿಂದ ಪ್ರಭಾಷಣ ನಡೆಯಲಿದೆ. ನೇತೃತ್ವ ನೀಡಲಿದ್ದಾರೆ.

ಅಕ್ಟೋಬರ್2 ರಂದು ಸಯ್ಯದ್ ತ್ವಾಹಾ ತಂಙಳ್, ಮಿಹ್ರಾಜ್ ತಂಙಳ್ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.

ಶೈಖುನಾ ಮಂಚಿ ಉಸ್ತಾದ್ ದುವಾಃಕ್ಕೆ ನೇತೃತ್ವ ನೀಡಲಿದ್ದಾರೆ.ಮಧ್ಯಾಹ್ನ ಜುಮಾ ನಮಾಜಿನ ಬಳಿಕ ಖತ್ಮುಲ್ ಖುರ್’ಆನ್ ಮಜ್ಲಿಸ್ ಶೈಖುನಾ ಬೊಳ್ಮಾರ್ ಉಸ್ತಾದ್ ನೇತೃತ್ವದಲ್ಲಿ ನಡೆಯಲಿದ್ದು ಅಸರ್ ನಮಾಜಿನ ಬಳಿಕ ಸಯ್ಯದ್ ಮದಕ ತಂಙಳ್ ನೇತೃತ್ವದಲ್ಲಿ ಬೋಳಂತೂರಿನಿಂದ ಅಶ್-ಅರಿಯದ ವರೆಗೆ ನಡೆಯುವ ಸಂದಲ್ ಮೆರವಣಿಗೆಯಲ್ಲಿ ದಕ್ಷಿಣ ಕರ್ನಾಟಕದ ವಿವಿಧೆಡೆಗಳಿಂದ ನೂರಾರು ಸಂಸ್ಥೆಯ ಹಿತೈಷಿಗಳು ಜೊತೆಸೇರಲಿದ್ದಾರೆ ಎಂದರು.

ಸಮಾರೋಪ ಸಮಾರಂಭದಲ್ಲಿ ಶೈಖುನಾ ಮಾಣಿ ಉಸ್ತಾದ್, ಶೈಖುನಾ ಪೇರೋಡ್ ಉಸ್ತಾದ್ ಸಹಿತ ನೂರಾರು ಉಲಮಾ ಶಿರೋಮಣಿಗಳು, ಸಾಮಾಜಿಕ, ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಸ್ಥೆಯ ಜನರಲ್ ಮೆನೇಜರ್ ಮುಹಮ್ಮದ್ ಆಲಿ ಸಖಾಫಿ ಮಾತನಾಡಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದಲ್ಲಿರುವ ಸುರಿಬೈಲು ದಾರುಲ್ ಅಶ್-ಅರಿಯ ಎಜುಕೇಷನಲ್ ಸೆಂಟರ್ ಸಂಸ್ಥೆಯು ಕಳೆದ 28 ವರ್ಷಗಳಿಂದಲೂ ಬಡ ಮತ್ತು ನಿರ್ಗತಿಕ ಕುಟುಂಬದ ಮಕ್ಕಳಿಗೆ ಉಚಿತವಾಗಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ನೀಡುತ್ತಿದೆ. ಸಂಸ್ಥೆಯಲ್ಲಿ ಇದೀಗ ಸಾವಿರದಷ್ಟು ವಿದ್ಯಾರ್ಥಿಗಳು ಕಲಿಕೆ ನಡೆಸುತ್ತಿದ್ದು 200 ಮಕ್ಕಳು ಉಚಿತ ವಿದ್ಯಾಭ್ಯಾಸ ಮತ್ತು ವಸತಿ ಸೌಲಭ್ಯದೊಂದಿಗೆ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ ಎಂದರು.

ಈ ಸಂದರ್ಭ ಸ್ವಾಗತ ಸಮಿತಿ ಚೇಯರ್ ಮ್ಯಾನ್ ಸುಲೈಮಾನ್ ಹಾಜಿ ಸಿಂಗಾರಿ , ಕನ್ವಿನರ್ ಮಹಮ್ಮದ್ ಮದನಿ, ಆರ್ಥಿಕ ಕನ್ವಿನರ್ ಯೂಸುಫ್ ಪನೇಲಾ,ಅಶ್ ಅರಿಯ್ಯ ಕೇಂದ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ಲಾ ಮುಸ್ಲಿಯಾರ್, ಅಬ್ದುಲ್ ರಝಾಕ್ ಹನೀಫಿ, ಇಬ್ರಾಹಿಂ ಸಖಾಫಿ ಸೆರ್ಕಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!