September 30, 2026

ಉಡುಪಿ: ಕಳವಾಗಿದ್ದ ಶ್ರೀ ದುರ್ಗಾಂಬ ಬಸ್ ಪತ್ತೆಹಚ್ಚಿದ ಪೊಲೀಸರು

0
image_editor_output_image-159862381-1790743888280

ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ನಿಲ್ಲಿಸಿದ್ದ ಸುಮಾರು ₹40 ಲಕ್ಷ ಮೌಲ್ಯದ ಶ್ರೀ ದುರ್ಗಾಂಬ ಬಸ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕಳುವಾಗಿದ್ದ ಬಸ್‌ನ್ನು ಉಡುಪಿ ನಗರ ಠಾಣೆ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಸೆಪ್ಟೆಂಬರ್ 28ರಂದು ರಾತ್ರಿ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ KA-20-AD-1931 ನೋಂದಣಿ ಸಂಖ್ಯೆಯ ಶ್ರೀ ದುರ್ಗಾಂಬ ಬಸ್‌ನ್ನು ನಿಲ್ಲಿಸಲಾಗಿತ್ತು.

 

ಬಸ್‌ನ ನಿರ್ವಾಹಕರಾದ ಕುಂದಾಪುರ ಕಟ್‌ಬೆಳ್ತೂರಿನ ಕೃಷ್ಣ (51) ಅವರು ರಾತ್ರಿ ಸುಮಾರು 10 ಗಂಟೆಗೆ ಚಾಲಕರೊಂದಿಗೆ ಸ್ಕೂಟರ್‌ನಲ್ಲಿ ಅಲ್ಲಿಂದ ತೆರಳಿದ್ದರು. ಸೆಪ್ಟೆಂಬರ್ 29ರಂದು ಬೆಳಗ್ಗೆ ಎಂದಿನಂತೆ ಬಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಬಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಯಾರೋ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಬಸ್‌ನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕೃಷ್ಣ ಅವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳು ಹಾಗೂ ಕಳುವಾದ ಸೊತ್ತಿನ ಪತ್ತೆಗೆ ತನಿಖೆ ಕೈಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!