ವಿಟ್ಲ: ಜಿಲ್ಲಾ ಮಟ್ಟದ 17ರ ವಯೋಮಾನದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ
ವಿಟ್ಲ ದ ಕ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಛೇರಿ ದ ಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಮತ್ತು ವಿಟ್ಠಲ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ವಿಟ್ಲ ಇವರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು ವಿಟ್ಠಲ ಪದವಿ ಪೂರ್ವ ಕಾಲೇಜಿನ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆಯಿತು.
ಈ ಪಂದ್ಯಾವಳಿಯನ್ನು ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಉದ್ಘಾಟಿಸಿದರು. ವಿಟ್ಠಲ ಎಜುಕೇಷನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ನಿವೃತ್ತ ಎ ಎಸ್ ಐ ಜಗನ್ನಾಥ ಶೆಟ್ಟಿ, ಪ್ರಭಾರ ಕ್ಷೇತ್ರ ಶಿಕ್ಷಣ ಅಧಿಕಾರಿ ಬಂಟ್ವಾಳ ಮಾಲತಿ ಕಾನತ್ತಡ್ಕ, ಟಿ ಪಿ ಇ ಐ ಆಶಾ ನಾಯಕ್, ವಿಟ್ಠಲ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಶಂಕರನಾರಾಯಣ ಪ್ರಸಾದ್, ಪ್ರಿನ್ಸಿಪಾಲ್ ಆದರ್ಶ ಚೊಕ್ಕಾಡಿ, ಐಟಿಐ ಪ್ರಿನ್ಸಿಪಾಲ್ ರಮೇಶ್ ರೈ, ಸುದರ್ಶನ ಪಡಿಯಾರ್, ರಮಾನಾಥ ವಿಟ್ಲ, ಜಗದೀಶ್ ತುಂಬೆ, ಹೆಚ್ ಸುಬ್ರಹ್ಮಣ್ಯ ಭಟ್, ಭಾಸ್ಕರ್ ರೈ, ನಿತ್ಯಾನಂದ ನಾಯಕ್, ಹರೀಶ್ ರೈ, ತುಳಸೀದಾಸ್ ಶೆಣೈ, ಶಿವಪ್ರಸಾದ್ ಶೆಟ್ಟಿ, ಜಯರಾಂ, ಅಶೋಕ ಭಟ್, ಪಿ ಡಿ ಶ್ರೀನಿವಾಸ ಗೌಡ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಕಬಡ್ಡಿ ಆಟಗಾರರಾದ ವಿಶ್ವನಾಥ ಅಳಿಕೆ, ಭರತ್ ಶೆಟ್ಟಿ, ವಿಶ್ವರಾಜ್, ಮಹಮ್ಮದ್ ಇಕ್ಬಾಲ್, ಧ್ಯಾನ್, ರಾಮಣ್ಣ ಪಿಲಿಂಜ, ವಸುಧಾ ಭಟ್, ಹಾಗೂ ದೈಹಿಕ ಶಿಕ್ಷಕರಾದ ಸುರೇಶ್ ಶೆಟ್ಟಿ, ವಿದ್ಯಾಶಂಕರ್ ಮತ್ತು ರಾಜೇಂದ್ರ ರೈ ಇವರನ್ನು ಗೌರವಿಸಲಾಯಿತು.
ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷನ ಅಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಪ್ರಸ್ತಾಪಿಸಿದರು. ಶಿಕ್ಷಕ ಶ್ರೀಹರಿ ವಂದಿಸಿದರು. ಸುರೇಶ್ ಶೆಟ್ಟಿ ನಿರೂಪಿಸಿದರು. ವಿಜಯ್ ಅತ್ತಾಜೆ ಮತ್ತು ರಮೇಶ್ ಬಿ ಕೆ ಸಹಕರಿಸಿದರು.





