ಶಿವಮೊಗ್ಗ: ಕಾರು ಅಪಘಾತಕ್ಕೆ ತುಂಡಾಗಿ ಬಿದ್ದ ವಿದ್ಯುತ್ ಕಂಬ
ಶಿವಮೊಗ್ಗ: ಕಾರಿಗೆ (Car) ಅಡ್ಡ ಬಂದ ಕಡವೆಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಹೊಸನಗರ ತಾಲೂಕಿನ ನಗರ ಸಮೀಪದ ನೂಲಿಗ್ಗೇರಿ ಬಳಿ ನಡೆದಿದೆ.
ಸಾಗರ ಮೂಲದ ಪ್ರಕಾಶ್ ಎಂಬವರು ಮಣಿಪಾಲ್‌ನಿಂದ ಸಾಗರಕ್ಕೆ ವಾಪಸ್ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ನೂಲಿಗ್ಗೇರಿ ಬಳಿ ಕಡವೆ ದಿಢೀರ್ ರಸ್ತೆಗೆ ನುಗ್ಗಿದೆ. ಕಡವೆಗೆ ಕಾರು ಡಿಕ್ಕಿಯಾಗೋದನ್ನು ತಪ್ಪಿಸಲು ಚಾಲಕ ಕಾರನ್ನು ಬದಿಗೆ ತರಲು ಯತ್ನಿಸಿದ್ದು, ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ತುಂಡಾಗಿ ಕಾರಿನ ಮೇಲೆ ವಿದ್ಯುತ್ ಕಂಬ ಬಿದ್ದಿದೆ.





