ಕಾಸರಗೋಡು : ಕಾಂಕ್ರೀಟ್ ಸ್ಲ್ಯಾಬ್ ಮೈಮೇಲೆ ಬಿದ್ದು ಯುವಕ ಸಾವು
ಕಾಸರಗೋಡು: ಮನೆ ಕೆಡವುತ್ತಿದ್ದ ಸಂದರ್ಭದಲ್ಲಿ ಕಾಂಕ್ರೀಟ್ ಸ್ಲ್ಯಾಬ್ ಮೈಮೇಲೆ ಬಿದ್ದ ಪರಿಣಾಮ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಕೂಡ್ಲು ಭಗವತಿ ನಗರದಲ್ಲಿ ನಡೆದಿದೆ.
ಪಾಲಕ್ಕಾಡ್ ಕೊಲ್ಲಂಗೋಡು ಪಯಲೂರ್ ಮುಕ್ಕ ನಿವಾಸಿ ವಿಶಾಖ್ ಚಂದ್ರನ್ (35) ಮೃತಪಟ್ಟವರು..ಭಗವತಿ ನಗರದಲ್ಲಿರುವ ತನ್ನ ಸಂಬಂಧಿಕರ ಮನೆಯೊಂದನ್ನು ಕೆಡವಲು ಸಹಾಯ ಮಾಡುವ ಸಲುವಾಗಿ ವಿಶಾಖ್ ಆಗಮಿಸಿದ್ದರು. ಮನೆ ಕೆಡವುತ್ತಿದ್ದ ವೇಳೆ ಕಾಂಕ್ರೀಟ್ ಸ್ಲ್ಯಾಬ್ ಕುಸಿದು ಅವರ ಮೇಲೆಯೇ ಬಿದ್ದಿದೆ.
ಸ್ಲ್ಯಾಬ್ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ವಿಶಾಖ್ ಅವರನ್ನು ತಕ್ಷಣವೇ ಸ್ಥಳೀಯರು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





