ಪದ್ಮರಾಜ್ ಪೂಜಾರಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ
ನವದೆಹಲಿ : 2028ರ ವಿಧಾನಸಭಾ ಚುನಾವಣೆಗೆ ಪಕ್ಷ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮೇಜರಿ ಸರ್ಜರಿ ನಡೆದಿದ್ದು ಹೊಸದಾಗಿ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.
ಎಐಸಿಸಿ ನೂತನ ಜಿಲ್ಲಾಧ್ಯಕ್ಷರ ಪಟ್ಟಿ ಪ್ರಕಟಿಸಿದ್ದು ಹೊಸ ಮುಖಗಳಿಗೆ ಮತ್ತು ಯುವ ನಾಯಕರಿಗೆ ಮಣೆ ಹಾಕಲಾಗಿದೆ.
ಬಹುನಿರೀಕ್ಷಿತ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಯುವ ನಾಯಕ ಪದ್ಮರಾಜ್ ರಾಮಯ್ಯ ಪೂಜಾರಿ ನೇಮಕವಾಗಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಪದ್ಮರಾಜ್ ಪೂಜಾರಿ ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಯ ಭದ್ರಕೋಟೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದರು. ಕಳೆದ 8 ವರ್ಷಗಳಿಂದ ಕೆ. ಹರೀಶ್ ಕುಮಾರ್ ಅವರು ದಕ್ಷಿಣ ಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರು. ಸದ್ಯ ಅವರು ಮೆಸ್ಕಾಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ. ಹರೀಶ್ ಕುಮಾರ್ ಅವರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸತತ ಹಿನ್ನಡೆ ಅನುಭವಿಸಿತ್ತು.
ಬಿಲ್ಲವ ಸಮುದಾಯದ ಹರೀಶ್ ಕುಮಾರ್ ಅವರ ತೆರವಾದ ಜಾಗಕ್ಕೆ ಬಿಲ್ಲವ ಸಮುದಾಯದವರೇ ಆಗಿರುವ ಪದ್ಮರಾಜ್ ಪೂಜಾರಿ ನೇಮಕವಾಗಿದ್ದಾರೆ.
ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಜಿಲ್ಲಾ ಕಾಂಗ್ರೆಸ್ ನಾಯಕರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. 15ಕ್ಕೂ ಅಧಿಕ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿ ಎಐಸಿಸಿ ವೀಕ್ಣಕರ ಮುಂದೆ ಹಕ್ಕು ಮಂಡಿಸಿದ್ದರು. ನೂತನ ಅಧ್ಯಕ್ಷ. ಹುದ್ದೆಗೆ ಐವನ್ ಡಿಸೋಜಾ, ಮಿಥುನ್ ರೈ, ಶಶಿಧರ್ ಹೆಗ್ಡೆ, ಪೃಥ್ವಿರಾಜ್, ಕೆ.ಕೆ ಶಾಹುಲ್ ಹಮೀದ್, ಎಂ.ಎಸ್ ಮುಹಮ್ಮದ್, ಪ್ರಕಾಶ್ ಶೆಟ್ಟಿ ತುಂಬೆ ಸೇರಿದಂತೆ ಹಲವರ ಹೆಸರು ಕೇಳಿಬಂದಿತ್ತು. ಅಂತಿಮವಾಗಿ ಎಐಸಿಸಿ ಪದ್ಮರಾಜ್ ಪೂಜಾರಿ ಅವರಿಗೆ ಮಣರ ಹಾಕಿದೆ. ಪದ್ಮರಾಜ್ ಪೂಜಾರಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಬೆಂಬಲಿಸಿದ್ದರು ಎಂದು ತಿಳಿದುಬಂದಿದೆ.
ಎಐಸಿಸಿ ಪ್ರಕಟಿಸಿರುವ ಜಿಲ್ಲಾಧ್ಯಕ್ಷರ ಪಟ್ಡಿಯಲ್ಲಿ ನಾಲ್ವರು ಮುಸ್ಲಿಮರಿಗೆ ಅವಕಾಶ ಒದಗಿಸಲಾಗಿದೆ. ದಾವಣಗೆರೆ, ಬೆಳಗಾವಿ ನಗರ, ಬೀದರ್ ಮತ್ತು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾಗಿ ಮುಸ್ಲಿಂ ನಾಯಕರನ್ನು ನೇಮಿಸಲಾಗಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಮುಸ್ಲಿಮರು ಮುನಿಸಿಕೊಂಡಿರುವ ಕಾರಣಕ್ಕೆ ಮುಸ್ಲಿಮರನ್ನ ಸಮಾಧಾನಪಡಿಸಲು ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ನೂತನ ಜಿಲ್ಲಾಧ್ಯಕ್ಷರ ಪಟ್ಟಿ:
ಬಾಗಲಕೋಟೆ : ದಯಾನಂದ ಎಸ್. ಪಾಟೀಲ್
ಬೆಂಗಳೂರು ಉತ್ತರ : ಅಬ್ದುಲ್ ವಾಜಿದ್
ಬೆಂಗಳೂರು ದಕ್ಷಿಣ: ಓ ಮಂಜುನಾಥ್
ಬೆಂಗಳೂರು ಪೂರ್ವ ಡಿ.ಕೆ ಮೋಹನ್ ಬಾಬು
ಬೆಂಗಳೂರು ಪಶ್ಚಿಮ : ಹನುಮಂತರಾಯಪ್ಪ
ಬೆಂಗಳೂರು ಕೇಂದ್ರ : ಎಸ್. ಶರವಣನ್
ಬೆಂಗಳೂರು ಗ್ರಾಮಾಂತರ : ಸಿ.ಪ್ರಸನ್ನ ಕುಮಾರ್
ಚಿಕ್ಕೋಡಿ : ಲಕ್ಷಣ್ ರಾವ್ ಚಿಂಗಾಲೆ
ಬೆಳಗಾವಿ ನಗರ : ಸಲಾವುದ್ದೀನ್ ಸಿ ಸಲೀಂ ಬಿ ಖಾತಿಬ್ (ರಾಜ ಸಲೀಂ)
ಬೆಳಗಾವಿ ಗ್ರಾಮಾಂತರ : ಬಸರಾಜ ಶೆಂಗಾವಿ
ಬಳ್ಳಾರಿ ನಗರ : ಅಲ್ಲುಂ ಪ್ರಶಾಂತ್
ಬಳ್ಳಾರಿ ಗ್ರಾಮಾಂತರ : ಕೆ. ಮಲ್ಲಿಕಾರ್ಜುನ್
ಬೀದರ್ : ಅಬ್ದುಲ್ ಮನ್ನಾನ್ ಸೇಠ್
ಚಾಮರಾಜನಗರ : ಜೆ. ಯೋಗೇಶ್
ಚಿಕ್ಕಮಗಳೂರು : ಹೆಚ್.ಪಿ. ಮಂಜೇಗೌಡ
ದಕ್ಷಿಣ ಕನ್ನಡ : ಪದ್ಮರಾಜ್ ಆರ್. ಪೂಜಾರಿ
ದಾವಣಗೆರೆ : ಇಬ್ರಾಹಿಂ ಖಲಿಲುಲ್ಲಾಹ್
ಧಾರವಾಡ ಗ್ರಾಮಾಂತರ : ಚಂದ್ರಶೇಖರ್ ಜುಟ್ಟಲ್
ಗದಗ : ವಸಣ್ಣ ಕುರ್ದಗಿ
ಕಲಬುರಗಿ : ಕಿರಣ್ ಎ. ದೇಶ್‌ಮುಖ್
ಹಾಸನ : ಶಶಿಧರ್ ಜಿ.ಬಿ
ಹಾವೇರಿ : ಸಂಜೀಬ್ ಕುಮಾರ್ ನೀರಲಾಗ್
ಹುಬ್ಬಳ್ಳಿ-ಧಾರವಾಡ ನಗರ : ಸದಾನಂದ ವಿ ದಂಗನವರ್
ಕೊಡಗು : ಧರ್ಮರಾಜ ಉತಪ್ಪ
ಕೋಲಾರ : ಎನ್.ನಾರಾಯಣಸ್ವಾಮಿ
ಕೊಪ್ಪಳ : ಎಂ. ಮಲ್ಲಿಕಾರ್ಜುನ್ ನಾಗಪ್ಪ
ಮಂಡ್ಯ : ಕುಮಾರ್ ಕೊಪ್ಪ





