September 6, 2026

ನೇಪಾಳ ಪ್ರವಾಹ: 10 ದಿನಗಳಿಂದ ಸಿಲುಕಿಕೊಂಡಿದ್ದ 60 ವರ್ಷದ ಮಹಿಳೆ ಜೀವಂತವಾಗಿ ರಕ್ಷಣೆ

0
000_c7et2g4_0

ನೇಪಾಳ: ಆಗಸ್ಟ್ 26ರಂದು ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ವೇಳೆ ನುವಾಕೋಟ್ ಜಿಲ್ಲೆಯ ಬೆಟ್ರವಾಟಿಯಲ್ಲಿ ಕುಸಿದ ನಾಲ್ಕು ಅಂತಸ್ತಿನ ಮನೆಯ ಮೇಲ್ಮಹಡಿಯಲ್ಲಿ 10 ದಿನಗಳಿಂದ ಸಿಲುಕಿಕೊಂಡಿದ್ದ 60 ವರ್ಷದ ಮಹಿಳೆಯೊಬ್ಬರನ್ನು ಜೀವಂತವಾಗಿ ರಕ್ಷಿಸಲಾಗಿದೆ.

ಬಿದೂರ್ ಮಹಾನಗರಪಾಲಿಕೆ-10ರ ನಿವಾಸಿ ಚಂದ್ರಿಕಾ ಶ್ರೇಷ್ಠ ಅವರನ್ನು ಮನೆಯ ಅವಶೇಷಗಳಡಿಯಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಹಚ್ಚಿ ರಕ್ಷಿಸಲಾಗಿದೆ.

ಒಂಭತ್ತು ಸದಸ್ಯರ ಸಶಸ್ತ್ರ ಪೊಲೀಸ್ ಪಡೆಯ ತಂಡವು ಚಂದ್ರಿಕಾ ಅವರನ್ನು ರಕ್ಷಿಸಿದ ಬಳಿಕ, ಪ್ರಾಥಮಿಕ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ತ್ರಿಶೂಲಿಯಲ್ಲಿರುವ ನೇಪಾಳ ಸೇನೆಯ ಮೈಥಿಲಿ ಬ್ಯಾರಕ್ ಗೆ ಕರೆದೊಯ್ಯಲಾಯಿತು. ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಠ್ಮಂಡುವಿಗೆ ಸ್ಥಳಾಂತರಿಸಲಾಗುವುದು ಎಂದು ಪ್ರಧಾನಿ ಕಚೇರಿ ತಿಳಿಸಿದೆ ಎಂದು ವರದಿ ಹೇಳಿದೆ.

ವ್ಯಾಪಕ ಪ್ರಮಾಣದ ಹಾನಿಗೆ ಕಾರಣವಾದ ಭೊಟೆಕೋಶಿ ಪ್ರವಾಹದಲ್ಲಿ 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 5,000 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹ ಸಂಭವಿಸಿದ 11 ದಿನಗಳ ಬಳಿಕ ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!