February 3, 2026

ಮಂಗಳೂರು: ಖಾಸಗಿ ಬಸ್ ಪಾದಚಾರಿಗೆ ಡಿಕ್ಕಿ:
ಛಿದ್ರ ಛಿದ್ರಗೊಂಡು ರಸ್ತೆಯಲ್ಲಿ ಚೆಲ್ಲಿದ  ಮೃತದೇಹ

0

ಮಂಗಳೂರು: ಖಾಸಗಿ‌ ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಮೂಳೂರಿನಲ್ಲಿ ನಡೆದಿದೆ.

ಮೂಳೂರು ಬೀಚ್ ಬಳಿಯ ನಿವಾಸಿ ರಮೇಶ್ ಬಂಗೇರ ಅಲಿಯಾಸ್ ಹರಿ ಓಂ (65) ಎಂಬವರು ಮೃತ ವ್ಯಕ್ತಿ.

ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬಸ್ ನಿಲ್ದಾಣ ದ ಬಳಿ ರಸ್ತೆ ದಾಟುತ್ತಿದ್ದ ಅವರಿಗೆ ಮಂಗಳೂರಿನಿಂದ ಉಡುಪಿ‌ ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ರಮೇಶ್ ಬಂಗೇರ ಅವರ ದೇಹ ಛಿದ್ರ ಛಿದ್ರವಾಗಿ ಹೋಗಿದ್ದು, ದೇಹದ ಭಾಗಗಳು ರಸ್ತೆಯಲ್ಲಿ ಚೆಲ್ಲಲ್ಪಟ್ಟಿವೆ.

Leave a Reply

Your email address will not be published. Required fields are marked *

error: Content is protected !!