ನೀರಾವರಿ ಯೋಜನೆ ಹಾಗೂ ಗೃಹ ಬಳಕೆಗೆ ಉಚಿತ ವಿದ್ಯುತ್ ಪೂರೈಕೆ: ಅಖಿಲೇಶ್ ಯಾದವ್
ಲಖನೌ: ಮುಂಬರುವ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ನೀರಾವರಿ ಯೋಜನೆ ಹಾಗೂ ಗೃಹ ಬಳಕೆಗೆ 300 ಯೂನಿಟ್ ಉಚಿತ ವಿದ್ಯುತ್ ಪೂರೈಸುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶನಿವಾರ ಭರವಸೆ ನೀಡಿದ್ದಾರೆ.

‘2022 ಉತ್ತರ ಪ್ರದೇಶದ ಜನತೆಯ ಪಾಲಿಗೆ ಹೊಸ ಬೆಳಕಿನ ವರ್ಷವಾಗಿರಲಿದೆ. ನೀರಾವರಿ ಯೋಜನೆ ಹಾಗೂ ಗೃಹ ಬಳಕೆಗೆ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಪೂರೈಸಲಾಗುವುದು’ ಎಂದು ಅಖಿಲೇಶ್ ಟ್ವೀಟಿಸಿದ್ದಾರೆ.
2021 ಸೆಪ್ಟೆಂಬರ್ ತಿಂಗಳಲ್ಲಿ ಆಮ್ ಆದ್ಮಿ ಪಕ್ಷವು ಇದಕ್ಕೆ ಸಮಾನವಾದ ಯೋಜನೆಯನ್ನು ಘೋಷಿಸಿತ್ತು. ಉತ್ತರ ಪ್ರದೇಶದಲ್ಲಿ ಪ್ರಸಕ್ತ ಸಾಲಿನಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ.




