ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ(ನಿ)ದ ವಾರ್ಷಿಕ ಮಹಾಸಭೆ ಬುಧವಾರ ಪೊನ್ನೊಟ್ಟು ಶಿವಗಿರಿ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ಮಾತನಾಡಿ, ಸಂಘದ ಕ್ಷಿಪ್ರ ಆರ್ಥಿಕ ಪ್ರಗತಿ, ಸರ್ವ ರೀತಿಯಲ್ಲೂ ಬೆಳವಣಿಗೆ ಹೊಂದುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಸಾಧನಾ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. ಸಂಘವು ಈಗಾಗಲೇ ಕೇಂದ್ರ ಕಚೇರಿ ಹೊರತು ಪಡಿಸಿ ಪುಣಚ ಮತ್ತು ಮಂಚಿಯಲ್ಲಿ ಎರಡು ಶಾಖೆಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಶಾಖೆ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸಂಘವು ಖರೀದಿಸಿದ ನಿವೇಶನದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಸದಸ್ಯರ, ಸಿಬ್ಬಂದಿಗಳ ಸಹಕಾರದಿಂದ ನಿರಂತರ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಸಂಘವು ಆರ್ಥಿಕ ವರ್ಷದಲ್ಲಿ ಸಂಘದಲ್ಲಿ 3542 ಸದಸ್ಯರಾಗಿದ್ದು, 1.45 ಕೋ.ಪಾಲು ಬಂಡವಾಳ ಹೊಂದಿದೆ. 21.36 ಕೋ.ರೂ.ಠೇವಣಿ ಹೊಂದಿದ್ದು, ಸಂಘಸಂಸ್ಥೆಗಳಿಗೆ 0.5 ಅಧಿಕ ಬಡ್ಡಿ ನೀಡುತ್ತಿದೆ. 21.93 ಕೋ.ರೂ.ಹೊರಬಾಕಿ ಸಾಲವಿದೆ.
114.72 ಕೋಟಿ ವಹಿವಾಟು ನಡೆಸಿ, 48.24 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಂಘದ ಷೇರುದಾರರಿಗೆ ಶೇ.11 ಡಿವಿಡೆಂಡ್ ವಿತರಿಸುವ ಬಗ್ಗೆ ಸಭೆಯಲ್ಲಿ ಘೋಷಿಸಲಾಯಿತು.
ಮಹಾಸಭೆಯನ್ನು ಹಿರಿಯ ಸದಸ್ಯ ಶಿವಪ್ಪ ಪೂಜಾರಿ ಕಾಶಿಮಠ, ಹರೀಶ್ ಶಾಂತಿ ಪುತ್ತೂರು, ಸಯ್ಯದ್ ಆಲಿ ಪರ್ತಿಪ್ಪಾಡಿ ಉದ್ಘಾಟಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಬಾಬು ಕೆ.ವಿ, ನಿರ್ದೇಶಕರಾದ ಡಾ. ಗೀತ ಪ್ರಕಾಶ್ ಎ, ರಾಘವ ಪೂಜಾರಿ, ಪ್ರಕಾಶ್ ಕೆ, ಅಭಿಜಿತ್ ಜೊತೆ, ಸಂಜೀವ ಪೂಜಾರಿ ಎಂ, ರವಿ ಬಿ.ಕೆ, ಮಾಧವ ಪೂಜಾರಿ, ವನಿತಾ ಚಂದ್ರಹಾಸ, ಶ್ವೇತಾ ಪದ್ಮನಾಭ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸದಸ್ಯರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಘದ ವಾರ್ಷಿಕ ವರದಿಯನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಂತ್ ಪಿ. ಮಂಡಿಸಿದರು.
ನಿರ್ದೆಶಕ ಶ್ರೀಧರ್ ಬಾಳೆಕಲ್ಲು ಸ್ವಾಗತಿಸಿದರು. ನಿರ್ದೇಶಕ ಜಗದೀಶ್ ಪಾಣೆಮಜಲು ವಂದಿಸಿದರು. ಸಿಬ್ಬಂದಿ ಜಗನ್ನಾಥ ಎಸ್. ಪುಣಚ ನಿರೂಪಿಸಿದರು. ನಿಶ್ಮಿತಾ ಎಸ್.ಡಿ, ಸಚಿತ್ ಕುಮಾರ್, ಅಂಕಿತಾ,ವಿಂಕಿತ ಸಹಕರಿಸಿದರು.





