August 30, 2026

ಸುಳ್ಯ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪಯಸ್ವಿನಿ ನದಿಯಲ್ಲಿ ಪತ್ತೆ

0
IMG-20260830-WA0040

ಸುಳ್ಯ: ಆಲೆಟ್ಟಿ ಗ್ರಾಮದ ಕುದ್ಕುಳಿಯ ನಿವಾಸಿ ಗಿರೀಶ್ ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು ಆ.30 ರಂದು ಪಯಸ್ವಿನಿ ನದಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಮನೆಯಿಂದ ಹುಲ್ಲು ತರಲೆಂದು ಹೋದ ಗಿರೀಶ್ ಬಳಿಕ ನಾಪತ್ತೆಯಾಗಿದ್ದರು. ಪಯಸ್ವಿನಿ ನದಿ ತಡದಲ್ಲಿ ಅವರ ಕೊಡೆ ಮತ್ತು ಕತ್ತಿ ಪತ್ತೆಯಾಗಿತ್ತು. ಬಳಿಕ ಪೊಲೀಸ್ ದೂರು ನೀಡಲಾಗಿತ್ತು.

ಸುಳ್ಯ ಪೋಲಿಸ್ ಇಲಾಖೆಯವರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಕಳೆದ ಎರಡು ದಿನಗಳಿಂದ ಹುಡುಕಾಟದಲ್ಲಿ ನಿರತರಾಗಿದ್ದರು. ಸದ್ಯ ಆದಿತ್ಯವಾರ ಬೆಳಗ್ಗೆ ಹುಡುಕಾಟ ನಡೆಸುವ ಸಂದರ್ಭದಲ್ಲಿ ಗಿರೀಶ್ ರವರ ಮೃತ ದೇಹ ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!