ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ NEET ಪರೀಕ್ಷೆಗೂ ಏನು ಸಂಬಂಧ: ವಿವಾದಾತ್ಮಕ ಹೇಳಿಕೆ ನೀಡಿದ ಸಿ.ಟಿ.ರವಿ
ಚಿಕ್ಕಮಗಳೂರು: ಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ. ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧರ್ಮೇಂದ್ರ ಪ್ರಧಾನ್ ಹಟಾವೋ ಅಂತೆ, ಮೋದಿ ರಾಜೀನಾಮೆ ನೀಡಬೇಕಂತೆ. ತುಕ್ಡೆ ಗ್ಯಾಂಗ್‍ಗಳು ಬಂದು ಮಾತನಾಡುತ್ತಾರೆ. ನಕಲಿ ಎನ್‍ಜಿಓಗಳಿಂದ ಅಕ್ರಮವಾಗಿ ಹಣ ಬರುತ್ತಿರುವುದನ್ನು ನಿಲ್ಲಿಸುವ ಕಾಯ್ದೆ ತರಲಾಗುತ್ತಿದೆ. ಭಯದಿಂದ ಮಾತನಾಡುತ್ತಿದ್ದಾರೆ, ಹೊರತು ವಿದ್ಯಾರ್ಥಿಗಳ ಬಗ್ಗೆ ಇರುವ ಕಳಕಳಿಯಿಂದಲ್ಲ ಎಂದು ಹೇಳಿದರು.
ಕಾಕ್ರೋಚ್ ಜನತಾ ಪಕ್ಷವಾಗಲಿ, ಕಾಂಗ್ರೆಸ್ ಹೋರಾಟವಾಗಲಿ, ಶಿಕ್ಷಣ ಸುಧಾರಣೆಗಾಗಿ ಅಲ್ಲ. ಪ್ರಧಾನಮಂತ್ರಿಯನ್ನು ಗುರಿಯಾಗಿಸಿಕೊಂಡು ಹೋರಾಟ ಮಾಡಲಾಗುತ್ತಿದೆ. ಅವರ ಹೋರಾಟದಲ್ಲಿ ಸ್ಥಿರ ಸರಕಾರವನ್ನು ಅಸ್ಥಿರಗೊಳಿಸುವ ಸಂಚು ರೂಪಿಸಿ ವಿದ್ಯಾರ್ಥಿಗಳ ಮೂಲಕ ದಂಗೆ ಎಬ್ಬಿಸುವ ಷಡ್ಯಂತರ ನಡೆಯುತ್ತಿದೆ ಎಂದು ಆರೋಪಿಸಿದರು.




