July 24, 2026

ಮುಹಿಯುದ್ದೀನ್ ಜುಮಾ ಮಸೀದಿ ಕಲ್ಲಡ್ಕದಲ್ಲಿ ಸಯ್ಯಿದುಲ್ ಉಲಮಾರ ಖಾಝಿ ಸ್ವೀಕಾರ ಸಮಾರಂಭ ನಡೆಯಿತು .

0
IMG-20260724-WA0262

ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ 20-7-2026 ರಂದು ರಾತ್ರಿ 8:30 ಕ್ಕೆ ನಡೆದ ಕಾರ್ಯಕ್ರಮದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಅದರ ಅಧೀನದಲ್ಲಿರುವ ಎರಡು ಮಹಲ್ಲುಗಳ ಖಾಝಿಯಾಗಿ ಸಮಸ್ತ ಕೇರಳ ಜಮೀಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್  ಅವರು ಅಧಿಕಾರ ಸ್ವೀಕರಿಸಿದರು.
ಮಸೀದಿ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕೋಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು .

ಮುಖ್ಯ ಅತಿಥಿಯಾಗಿ ಆಗಮಿಸಿದ ಸಮಸ್ತ ಮುಶಾವರ  ಸದಸ್ಯ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಅವರು ಖಾಝಿಯವರ ಸ್ಥಾನಮಾನ ಹಾಗೂ ಮಹತ್ವದ ಕುರಿತು ಮಾತನಾಡಿದರು.

ಉಸ್ಮಾನ್ ಫೈಝಿ ತೋಡಾರು ,
ಬೋಳಿಯಾರ್ ಖತೀಬರಾದ ಅಕ್ರಂ ಅಲೀ ತಂಙಳ್ , ಮಿತ್ತಬೈಲ್ ಜುಮಾ ಮಸೀದಿ ಅಧ್ಯಕ್ಷರಾದ
ಮುಹಮ್ಮದ್ ಸಾಗರ್ ,ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ
ಹಾಜಿ ಜಿ.ಎಂ. ಮುಹಮ್ಮದ್ ಹನೀಫ್, ಶೇಕಬ್ಬ ಕೆ.ಸಿ. ರೋಡ್, ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾದ ಅಬೂಬಕ್ಕರ್ ಹಾಜಿ, ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಖತೀಬ್ ಅಲಿ ಮನ್ನಾನಿ, ಯಹ್ಯಾ ದಾರಿಮಿ, ಮುನವ್ವರ್ ಬಾಖವಿ ಹಾಗೂ ಅನೇಕ ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಮುಹ್ಯುದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಪನಾಮ ಅವರು ಸ್ವಾಗತಿಸಿ, ಮನ್ಸೂರ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!