July 21, 2026

ವಿಟ್ಲ:  ಹೊರೈಝನ್ ಶಾಲೆ :JEE ಸಾಧಕ ವಿಜೇತ ವಿದ್ಯಾರ್ಥಿಯೊಂದಿಗೆ  ಸಂವಾದ

0
IMG-20260721-WA0095

ವಿಟ್ಲ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ JEE ಪರೀಕ್ಷೆಯಲ್ಲಿ ಅಖಿಲ ಭಾರತ 2321ನೇ   ರ‌್ಯಾಂಕ್  ಗಳಿಸಿದ ಮೊಹಮ್ಮದ್ ಮಿಹ್ರಾನ್ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮೊಹಮ್ಮದ್ ಮಿಹ್ರಾನ್ ಅವರು ತಮ್ಮ ಜೆಇಇ ಪರೀಕ್ಷೆಯ ಸಿದ್ಧತೆ, ಅಧ್ಯಯನ ವಿಧಾನಗಳು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅವಕಾಶಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಅಮೂಲ್ಯ ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಯಶಸ್ಸು ಸಾಧಿಸಲು ಶಿಸ್ತು, ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದ ಮಹತ್ವವನ್ನು ಅವರು ವಿವರಿಸಿದರು.

ಶಾಲಾ ಅಧ್ಯಕ್ಷ  ಅಝೀಝ್ ಸನ ಮೊಹಮ್ಮದ್ ಮಿಹ್ರಾನ್ ರವರ ಅದ್ವಿತೀಯ ಸಾಧನೆಗಾಗಿ ಶಾಲು, ಸ್ಮರಣಿಕೆ ಹಾಗೂ ಕಿರುಕಾಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕ  ಮನಾಝಿರ್ ಮುಡಿಪು, ವಿಸ್ಡಂ ಶಾಲೆಯ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಉಪಸ್ಥಿತರಿದ್ದರು.

.

Leave a Reply

Your email address will not be published. Required fields are marked *

error: Content is protected !!