October 31, 2026

ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆ: ವಿಟ್ಲ ಜೇಸಿ ಶಾಲಾ ವಿದ್ಯಾರ್ಥಿನಿ ಸಮನ್ವಿ ಆರ್ ಶೇ. 96% ಅಂಕ ಪಡೆದು ಉತ್ತೀರ್ಣ

0
image_editor_output_image-1557702173-1793415287074

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ಮೇ ತಿಂಗಳಲ್ಲಿ ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ಸಮನ್ವಿ ಆರ್ ಶೇಕಡಾ 96 (400ರಲ್ಲಿ 384) ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾಳೆ.

ಈಕೆ ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಇದರ ಸಂಗೀತ ಶಿಕ್ಷಕಿ ಶ್ರೀಮತಿ ಸವಿತಾ ಕೋಡಂದೂರು ಇವರ ಬಳಿ ಸಂಗೀತ ಅಭ್ಯಾಸ ಮಾಡುತ್ತಿದ್ದಾಳೆ.

ಈಕೆ ವಿಠಲ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷಕರಾಗಿರುವ ರಮೇಶ್ ಬಿ.ಕೆ ಹಾಗೂ ಆಶಾಲತಾ ದಂಪತಿಗಳ ಪುತ್ರಿ.
ಪ್ರಸ್ತುತ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ ಇಲ್ಲಿ 7ನೇ ತರಗತಿ ಕಲಿಯುತಿದ್ದಾಳೆ.

Leave a Reply

Your email address will not be published. Required fields are marked *

You may have missed

error: Content is protected !!