ಮಂಜೇಶ್ವರ: ಉಪಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಶಾಸ್ತ್ರ ಮೇಳ: ಬಾಕ್ರಬೈಲು ಎ.ಯು.ಪಿ ಶಾಲೆ ಸಮಗ್ರ ಚಾಂಪಿಯನ್
ಮಂಜೇಶ್ವರ ಉಪಜಿಲ್ಲಾ ಮಟ್ಟದ ಯುಪಿ ವಿಭಾಗದ ಸಮಾಜ ವಿಜ್ಞಾನ ಶಾಸ್ತ್ರ ಮೇಳದಲ್ಲಿ ಬಾಕ್ರಬೈಲು ಎ.ಯು.ಪಿ ಶಾಲೆಯು ಸಮಗ್ರ ಚಾಂಪಿಯನ್ ಶಿಪ್ ನ್ನು ಮುಡಿಗೇರಿಸಿಕೊಂಡು ಅಮೋಘ ಸಾಧನೆಯನ್ನು ಮೆರೆದಿದೆ.
ಉಪ್ಪಳದ ಐಲ ಶ್ರೀ ಶಾರದಾ ಬೋವಿಸ್ ಎ.ಯು.ಪಿ ಶಾಲೆಯಲ್ಲಿ ನಡೆದ ಮೇಳದಲ್ಲಿ 65 ಶಾಲೆಗಳು ಭಾಗವಹಿಸಿದ್ದು, ಬಾಕ್ರಬೈಲು ಶಾಲೆಯ ಮಕ್ಕಳ ವಿಶೇಷ ಸಾಧನೆಯಿಂದ ಸಮಗ್ರ ಚಾಂಪಿಯನ್ ಕಿರೀಟಕ್ಕೆ ಭಾಜನರಾಗಿದ್ದಾರೆ. ಯುಪಿ ಸೋಶಿಯಲ್ ಸೈನ್ಸ್ ವರ್ಕಿಂಗ್ ಮಾಡೆಲ್ ನಲ್ಲಿ ಚಿರಸ್ವಿ ಮತ್ತು ಹಲಿಮತ್ ಸಹದಿಯಾ ಎ ಗ್ರೇಡ್ ನೊಂದಿಗೆ ಪ್ರಥಮ, ಯುಪಿ ಸ್ಟಿಲ್ ಮಾಡೆಲ್ ನಲ್ಲಿ ಫಸೀಹ ಮತ್ತು ಯುಕ್ತಿ ಎ ಗ್ರೇಡ್ ನೊಂದಿಗೆ ದ್ವಿತೀಯ, ಸೋಶಿಯಲ್ ಸೈನ್ಸ್ ಕ್ವಿಜ್ ನಲ್ಲಿ ವೈಷ್ಣವಿ “ಎ” ಗ್ರೇಡ್, ಸೋಶಿಯಲ್ ಸೈನ್ಸ್ ಭಾಷಣ ಸ್ಪರ್ಧೆಯಲ್ಲಿ ಮಹಮ್ಮದ್ ಝಿಬಾನ್ “ಎ” ಗ್ರೇಡ್ ಹಾಗೂ ವಿವಿಧ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಬಾಕ್ರಬೈಲು ಎ.ಯು.ಪಿ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ರಕ್ಷಕರ ಸಹಕಾರಕ್ಕೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.



