ಉಡುಪಿ: ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧಾರ್ಮಿಕ ತಾರತಮ್ಯ: ಕ್ಯಾಂಪಸ್ ಫ್ರಂಟ್ ಖಂಡನೆ
ಉಡುಪಿ: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿದ ಕಾರಣ ಅವರನ್ನು ತರಗತಿಯಿಂದ ಹೊರ ಹಾಕಿದ ಘಟನೆ ಖಂಡನೀಯ ಎಂದು ಸಿಎಫ್ ಐ ಹೇಳಿದೆ.
ಭಾರತೀಯ ಸಂವಿಧಾನದ ೨೫ನೇ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಮೂಲಭೂತ ಹಕ್ಕುಗಳಾಗಿ ಸೇರಿಸಿದೆ. ಇದರ ಪ್ರಕಾರ ಎಲ್ಲಾ ವ್ಯಕ್ತಿಗಳು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ, ಪ್ರಚಾರ ಮಾಡುವ ಹಕ್ಕನ್ನು ಹೊಂದಿದ್ದಾರೆ. ಇದಲ್ಲದೆ ಎಲ್ಲಾ ಪಂಗಡಗಳು ತಮ್ಮದೇ ಆದ ಧಾರ್ಮಿಕ ನಿರ್ವಹಣೆಯನ್ನು ಮಾಡಬಹುದಾಗಿದೆ ಎಂದು ಸಂವಿಧಾನದ ೨೬ನೇ ವಿಧಿಯು ಹೇಳುತ್ತದೆ.
ಒಂದು ಮುಸ್ಲಿಂ ಮಹಿಳೆಗೆ ಹಿಜಾಬ್ ಧರಿಸುವುದು ಅವರ ಧಾರ್ಮಿಕ ನಂಬಿಕೆಗಳಲ್ಲಿ ಒಂದಾಗಿದೆ ಆದರೆ ಈ ಹಕ್ಕನ್ನು ಅವರಿಂದ ಕಸಿದುಕೊಳ್ಳಲಾಗುತ್ತಿದೆ. ಕಾಲೇಜಿನಲ್ಲಿ ಮುಸ್ಲಿಂ ಧರ್ಮವನ್ನು ಅಭ್ಯಸಿಸುವಾಗ ಅದನ್ನು ತಡೆಯಲಾಗತ್ತದೆ ಆದರೆ ಸಹೋದರ ಧರ್ಮದ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ತಡೆ ಇಲ್ಲದೆ ಅದನ್ನು ಶಿಕ್ಷಕರ ನೇತೃತ್ವದಲ್ಲಿ ಮಾಡಲಾಗುತ್ತದೆ. ಇಂತಹ ಧಾರ್ಮಿಕ ತಾರತಮ್ಯವು ನಡೆಯುತ್ತಿದೆ. ಬಹುಮುಖ್ಯವಾಗಿ ವಿದ್ಯಾರ್ಥಿನಿಯರು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದರು ಆದರೆ ಇದೀಗ ಶಿಕ್ಷಕ ವೃಂದದ ಕೆಲವೊಬ್ಬರು ಹಿಜಾಬ್ ಧರಿಸಲು ತಡೆಯುತ್ತಿದ್ದಾರೆ ಹಾಗೂ ತರಗತಿಗೆ ಪ್ರವೇಶಿಸಲು ನಿರಾಕರಿಸುತ್ತಿದ್ದಾರೆ. ಆ ವಿದ್ಯಾರ್ಥಿನಿಯರ ಪೋಷಕರು ಇದರ ಕುರಿತು ಮಾತನಾಡಲು ಹೋದಾಗ ಅಲ್ಲಿಯ ಪ್ರಾಂಶುಪಾಲರು ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ. ಹಾಗೂ ಕ್ಯಾಂಪಸ್ ಫ್ರಂಟ್ ನ ನಾಯಕರು ಹೋದಾಗ ಅವರನ್ನು ಸಹ ಅಲ್ಲಿಯ ಪ್ರಾಂಶುಪಾಲರು ಲೆಕ್ಕಿಸಲಿಲ್ಲ.ನಿನ್ನೆ ಇದರ ಕುರಿತು ddp ಗೆ ಪತ್ರವನ್ನು ನೀಡಲಾಗಿತ್ತು ಅಲ್ಲಿ ಅವರು ಈ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂದು ಭರವಸೆ ನೀಡಿದ್ದರು. ಆದರೆ ಇವತ್ತು ಪುನಃ ಆ ವಿದ್ಯಾರ್ಥಿನಿಯರನ್ನು ಇದೇ ಕಾರಣಕ್ಕೆ ತರಗತಿಯಿಂದ ಹೊರ ಹಾಕಿದ್ದಾರೆ. ನಮ್ಮ ಬೇಡಿಕೆ ಏನೆಂದರೆ ಅಲ್ಲಿಯ ಪ್ರಾಂಶುಪಾಲರನ್ನು ಅಮಾನತುಗೊಳಿಸಬೇಕು. ಅಲ್ಲಿ ನಡೆಯುತ್ತಿರುವ ಧಾರ್ಮಿಕ ತಾರತಮ್ಯವನ್ನು ಖಂಡಿಸಬೇಕು ಹಾಗೂ ಆ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಬೇಕು ಕ್ಯಾಂಪಸ್ ಫ್ರಂಟ್ ಆಗ್ರಹಿಸಿದೆ.