ಸುಳ್ಯ: ‘ಕಾನೂನು ಅರಿವಿನ ಗೀತೆಗಳ’ ವಿಡಿಯೋ ಆಲ್ಬಂ ಬಿಡುಗಡೆ
ಸುಳ್ಯ: ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ್ ಎ, ಹಾಗೂ ಕಿರಿಯ ನ್ಯಾಯಾಧೀಶ ಯಶ್ವಂತ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ಧನ್ ಎ ರವರ ಸಾಹಿತ್ಯ, ನಿರ್ದೇಶನದಲ್ಲಿ ಮೂಡಿಬಂದ ಕಾನೂನು ಅರಿವಿನ ಗೀತೆಯ ವಿಡಿಯೋ ಆಲ್ಬಮ್ ಅನ್ನು ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಜಸ್ಟಿಸ್ ಅಬ್ದುಲ್ ನಜೀರ್ ಬಿಡುಗಡೆಗೊಳಿಸಿದರು.
ಕಾನೂನು ಸೇವೆಗಳ ಸಮಿತಿ ಸುಳ್ಯ ದ.ಕ ಇವರ ವತಿಯಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಪಿಸಿದ ಕಾನೂನು ಅರಿವಿನ ಗೀತೆಗಳು ವಿಡಿಯೋ ಆಲ್ಬಂ ಹಾಡುಗಳ ಧ್ವನಿಸುರುಳಿಯಲ್ಲಿ ಮೂಡಿ ಬಂದಿದೆ.
ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ನುಡಿಸಿರಿಯ ವರ್ಣ ರಂಜಿತ ವೇದಿಕೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ಕಾನೂನು ಸೇವಾ ಶಿಭಿರ ದ ಉದ್ಘಾಟನೆ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಜಸ್ಟೀಸ್ ಅಬ್ದುಲ್ ನಝೀರ್ ರವರು ಸಿ ಡಿ ಅನಾವರಣ ಗೊಳಿಸಿದರು.
ವೇದಿಕೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜ್ಯ ಕಾನೂನೂ ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಸ್ಟೀಸ್ ಬಿ ವೀರಪ್ಪ, ದಕ್ಷಿಣ ಕನ್ನಡ ಆಡಳಿತಾತ್ಮಕ ನ್ಯಾಯಾಧೀಶ ಜಸ್ಟೀಸ್ ಸೋಮಶೇಖರ ಕೆ , ಹೈಕೋರ್ಟ್ ನ ಮಹವಿಲೇಖನಾಧಿಕಾರಿ ಟಿ.ಜಿ ಶಿವ ಶಂಕರೇ ಗೌಡ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಸ್ಟೀಸ್ ಶಶಿಧರ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಾಧೀಶ ಮುರಲಿಧರ ಪೈ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ. ವಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಮೂಡಬಿದ್ರೆ ವಕೀಲರ ಸಂಘ ದ ಅಧ್ಯಕ್ಷ ಸುಬ್ರಮಣ್ಯ ತಂತ್ರಿ ಮೊದಲಾದವರು ಉಪಸ್ಥಿತರಿದ್ದರು.
ಈ ಗೀತೆಯನ್ನು ಸುಳ್ಯದ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ. ರವರ ಸಾಹಿತ್ಯ, ನಿರ್ದೇಶನ, ದಲ್ಲಿ ವಿ ಕೆ ಜೋಡಿತಾರೆ ಪೊರ್ಣಿಮಾ ಕೃಷ್ಣರಾಜ್ ಗಾಯನದಲ್ಲಿ ಅಶ್ವಿನ್ ಪುತ್ತೂರು ಸಂಗೀತ ಮತ್ತು ರೆಕಾರ್ಡಿಂಗ್ ಮಾಡಿರುತ್ತಾರೆ. ಧ್ವನಿಸುರುಳಿಯ ವಿಡಿಯೋ ಎಡಿಟಿಂಗ್ ಸಹಕಾರವನ್ನು ಸುಳ್ಯ ಸುದ್ದಿ ಮೀಡಿಯಾ ಸಹಕಾರವನ್ನು ಮಾಡಿದೆ.





