September 17, 2024

ಮಂಗಳೂರು: ಬೋಟ್‌ನಲ್ಲಿ ಮೀನು ಹಿಡಿಯಲು ಹೋದ ಯುವಕ ನಾಪತ್ತೆ

0

ಮಂಗಳೂರು: ಬೋಟ್‌ನಲ್ಲಿ ಮೀನು ಹಿಡಿಯಲು ಹೋದ ಯುವಕನೋರ್ವ ನಾಪತ್ತೆಯಾದ ಘಟನೆ ಪಣಂಬೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಡಿ.26ರಂದು ನಡೆದಿದೆ. ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದವರನ್ನು ನಿಲೇಶ್‌ ಎಕ್ಕಾ(32) ಎಂದು ಗುರುತಿಸಲಾಗಿದೆ.

ಡಿ. 26ರಂದು ನಿಲೇಶ್ ಎಕ್ಕಾ ರಾತ್ರಿ 12-00 ಗಂಟೆಗೆ ಸ್ಯಾನ್ಸ್ ಪಿಟ್ ಬೆಂಗರೆ ಯಿಂದ 26 ಜನರ ಜತೆಗೆ ಮೀನುಹಿಡಿಯಲು ಬೋಟ್ ನಲ್ಲಿ ಹೋಗಿದ್ದಾರೆ. ಅಳಿವ ಬಾಗಿಲು ಮೂಲಕ ಸಮುದ್ರಕ್ಕೆ ಹೋಗಿ ಸುಮಾರು 5 ಕಿಮೀ ಕ್ರಮಿಸಿದಾಗ ಬೋಟ್‌ನಲ್ಲಿದ್ದ ನೀಲೇಶ್ ಏಕಾಏಕಿ ಕಾಣಿಯಾಗಿದ್ದಾನೆ.

ತಕ್ಷಣ ಬೋಟು ನಿಲ್ಲಿಸಿ ಎಲ್ಲಾ ಕಡೆಗೆ ಹುಡುಕಾಡಿದಾಗ ನೀಲೇಶ್ ಎಕ್ಕಾ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕರಾವಳಿ ಕಾವಲು ಪೊಲೀಸ್‌ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!