June 23, 2026

ದೇರಳಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಖಾಸಗಿ ಬಸ್

0
image_editor_output_image1798273665-1782202277921


ಮಂಗಳೂರು: ಮಂಗಳೂರಿನ ದೇರಳಕಟ್ಟೆ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆಯ ಡಿವೈಡರ್ ಮೇಲೇರಿ ನಿಂತ ಘಟನೆ ಮಂಗಳವಾರ ಸಂಭವಿಸಿದೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಭಾರಿ ದೊಡ್ಡ ದುರಂತವೊಂದು ತಪ್ಪಿದೆ.


ದೇರಳಕಟ್ಟೆ ಮಾರ್ಗವಾಗಿ ಮಂಗಳೂರಿಗೆ ಸಂಚರಿಸುತ್ತಿದ್ದ ‘ಶ್ರೀ ಗೋಪಾಲಕೃಷ್ಣ’ (SRI GOPALAKRISHNA) ಹೆಸರಿನ ಖಾಸಗಿ ಬಸ್ ಇದಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಮಧ್ಯದ ಡಿವೈಡರ್ ಹಾಗೂ ಅದರಲ್ಲಿದ್ದ ಗಿಡಗಳ ಮೇಲೇರಿದೆ. ‌ ಬಸ್ ಡಿವೈಡರ್ ಮಧ್ಯೆ ಸಿಲುಕಿಕೊಂಡಿದ್ದು, ಇದರಿಂದಾಗಿ ರಸ್ತೆಯಲ್ಲಿ ಕೆಲಕಾಲ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.

ಬಸ್ ನಿಯಂತ್ರಣ ತಪ್ಪಿದ ತಕ್ಷಣ ಬೇರೆ ಯಾವುದೇ ವಾಹನಗಳಿಗೆ ಅಥವಾ ಪಾದಚಾರಿಗಳಿಗೆ ಡಿಕ್ಕಿಯಾಗದೆ ನೇರವಾಗಿ ಡಿವೈಡರ್ ಮೇಲೇರಿ ನಿಂತಿದ್ದರಿಂದ ಭಾರಿ ಪ್ರಾಣಾಪಾಯ ಮತ್ತು ದೊಡ್ಡ ಅವಘಡವೊಂದು ತಪ್ಪಿದಂತಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲು ನೆರವಾದರು. ತೀವ್ರ ಜನದಟ್ಟಣೆ ಇರುವ ದೇರಳಕಟ್ಟೆ ಮುಖ್ಯ ರಸ್ತೆಯ ಪರಿಸರದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ತದನಂತರ ಬಸ್ ಅನ್ನು ರಸ್ತೆಯಿಂದ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಯಿತು.

Leave a Reply

Your email address will not be published. Required fields are marked *

error: Content is protected !!