June 21, 2026

ವಿಟ್ಲ: ನಾಡಕಚೇರಿಗೆ ತೆರಳಲು ಹಿಂದೇಟು ಹಾಕುತ್ತಿರುವ ಜನರು: ಮಾಹಿತಿ ಪಡೆಯಲು  ನಾಡಕಚೇರಿ ತೆರಳುವ ಜನರನ್ನು ನಿಂದಿಸುವ ನಾಡಕಚೇರಿ ಉಪತಹಶೀಲ್ದಾರ್ (D.T)ಉಪತಹಶೀಲ್ದಾರ್ ವಿರುದ್ಧ ಕ್ರಮ ಜರುಗಿಸಲು ಶಾಸಕರಿಗೆ ದೂರು ನೀಡಲು ಮುಂದಾದ  ಗ್ರಾಮಸ್ಥರು

0
image_editor_output_image330375531-1781626492082

ವಿಟ್ಲ: ವಿಟ್ಲ ಹೋಬಳಿಯ ನಾಡಕಚೇರಿಯ ಉಪತಹಶೀಲ್ದರ್ ಅವರ ವರ್ತನೆಯಿಂದ ವಿಟ್ಲದ ಜನತೆ ರೋಸಿ ಹೋಗಿದ್ದಾರೆ. ಇಲ್ಲಿಗೆ ಮಾಹಿತಿ ಕೇಳಲು ಹೋಗುವ ಜನರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂದಕ್ಕೆ ಕಳುಹಿಸುತ್ತಿದ್ದಾರೆ ಇವರನ್ನು ಇಲ್ಲಿಂದ ತಕ್ಷಣವೇ ಎತ್ತಂಗಡಿ ಮಾಡಬೇಕಾಗಿ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.

ಸುಮಾರು 20ಕ್ಕಿಂತಲೂ ಅಧಿಕ ಗ್ರಾಮಗಳು ವಿಟ್ಲ ಹೋಬಳಿಯ ನಾಡಕಚೇರಿಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿಗೆ ಜನರು ಆದಾಯ, ಜಾತಿ ಪ್ರಮಾಣ ಪತ್ರ ಮೊದಲಾದ ಅರ್ಜಿಗಳನ್ನು ಹಿಡಿದುಕೊಂಡು ಬರುತ್ತಾರೆ. ಇಲ್ಲಿಯ ಸಿಬ್ಬಂದಿಗಳು ಪ್ರಮಾಣಿಕವಾಗಿ  ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನರಿಗೆ ನಗುಮುಖದ ಸೇವೆ ನೀಡುತ್ತಿದ್ದಾರೆ.

ಅವಿದ್ಯವಂತರಿಗೆ  ಯಾವುದಾದರೂ ಸಮಸ್ಯೆ ಇದ್ದಾಗ ನಾಡಕಚೇರಿ ತೆರಳಿ ಇಲ್ಲಿರುವ ಮಹಿಳಾ ಉಪತಶೀಲ್ದಾರ್ ಅವರಲ್ಲಿ ಕೇಳಿದಾಗ ಅವರು ಉಡಾಫೆಯಿಂದ ವರ್ತಿಸುವುದಲ್ಲದೇ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಇಲ್ಲಿಗೆ ಬಂದ ಈ ಮಹಿಳೆ ಜನರಿಗೆ ನಿರಂತರವಾಗಿ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಟ್ಲದ ಶಿಕ್ಷಕರೊಬ್ಬರು ತನ್ನ ಮಗನ  ಜಾತಿ ಪ್ರಮಾಣ ಪತ್ರಕ್ಕೆ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಅದರ ಸ್ಥಿತಿ ಬಗ್ಗೆ ಉಪತಹಶೀಲ್ದಾರ್ ಬಳಿ ವಿಚಾರಿಸಲು ಹೋದಾಗ ಈ ಮಹಿಳೆ ಉಪತಹಶೀಲ್ದಾರ್ ಶಿಕ್ಷಕರನ್ನು ಏಕವಚನದಲ್ಲಿ ನಿಂದಿಸಿ ಹಿಂದಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಬೆಳಿಗ್ಗೆನಿಂದಲೇ ಸಂಜೆ ವರೆಗೆ ಕಚೇರಿಯಲ್ಲಿ ಮೊಬೈಲ್ ಬಳಸುತ್ತಾ ಕಾಲಹರಣ ಮಾಡುವ ಕಾಯಕ ಇವರದ್ದು, ಜನರು ಇವರ ವರ್ತನೆಯಿಂದ ತೊಂದರೆಗೆ ಒಳಗಾಗಿದ್ದಾರೆ.

ಸರಕಾರ ಕಂದಾಯ ಇಲಾಖೆಯ ಸೌಲಭ್ಯಗಳು ಜನರಿಗೆ ವೇಗವಾಗಿ ತಲುಪುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದರೂ ಇಂತಹ ಬೇಜಾಬ್ದಾರಿತನ ವರ್ತನೆ ಇಲ್ಲಿಯ ಸರಕಾರ ಮತ್ತು ಸ್ಥಳೀಯ ಶಾಸಕರಿಗೆ ಕಳಂಕ ತರುವಂತ ವಿಚಾರ. ಈ ಹಿಂದೆಯೂ ಹಲವು ಬಾರಿ ಹಲವಾರು ಬಡಜನರ ಮೇಲೆ ಈ ಉಪತಹಶೀಲ್ದಾರ್ ಇದೇ ರೀತಿಯ ವರ್ತನೆ ಮಾಡಿದ್ದ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಪುತ್ತೂರು ಶಾಸಕ, ಜಿಲ್ಲಾಧಿಕಾರಿಗಳು ಇವರ  ಮೇಲೆ ಕ್ರಮ ಕೈಗೊಂಡು ಇವರಿಂದ ಅನ್ಯಾಯಗೊಳಗಾದ ಜನರಿಗೆ ನ್ಯಾಯ ಒದಿಸಿಕೊಡಬೇಕಾಗಿ ಹೋರಾಟಕ್ಕೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!