June 15, 2026

ಯುವತಿಯ ಕತ್ತುಹಿಸುಕಿ ಕೊಲೆ ಮಾಡಿದ ಭಗ್ನಪ್ರೇಮಿ

0
image_editor_output_image1774374657-1781515645844.jpg

ಬೆಂಗಳೂರು: ಭಗ್ನಪ್ರೇಮಿಯೊಬ್ಬ ಯುವತಿಯ ಕತ್ತುಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ  ತಿಗಳರಪಾಳ್ಯ ತುಳಸಿನಗರದಲ್ಲಿ ನಡೆದಿದೆ.

ಭವಾನಿ (22) ಭಗ್ನಪ್ರೇಮಿಯಿಂದ ಕೊಲೆಯಾದ ಯುವತಿ. ಚಂದ್ರಶೇಖರ್ ಕೊಲೆ ಆರೋಪಿ.

ಮೊಬೈಲ್‌ ಶೋ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಭವಾನಿಗೆ, ಕೆಲಸದ ಸ್ಥಳದಲ್ಲೇ ಚಂದ್ರಶೇಖರ್‌ನ ಪರಿಚಯವಾಗಿತ್ತು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ವಿಚಾರ ತಿಳಿದ ಭವಾನಿಗೆ ಮನೆಯಲ್ಲಿ ಬೇರೆ ಹುಡುಗನೊಂದಿಗೆ ಮದ್ವೆ ಮಾಡಲು ಮುಂದಾಗಿದ್ದರು. ಈ ವಿಚಾರ ತಿಳಿದ ಚಂದ್ರಶೇಖರ್‌, ಭವಾನಿ ವಾಸಿಸುತ್ತಿದ್ದ ರೂಮ್‌ಗೆ ಹೋಗಿದ್ದಾನೆ. ಆಕೆಯ ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Leave a Reply

Your email address will not be published. Required fields are marked *

error: Content is protected !!