ತನ್ನ 6 ತಿಂಗಳ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನಿಂದ ಜಿಗಿದ ಮಹಿಳೆ: ಮಹಿಳೆ ಸ್ಥಳದಲ್ಲೇ ಸಾವು, ಅದೃಷ್ಟವಶಾತ್ ಬದುಕುಳಿದ ಮಗು
ಹೈದರಾಬಾದ್: ಹೈದರಾಬಾದ್‌ನ ಮಿಯಾಪುರ್ ಪ್ರದೇಶದ ಮಯೂರಿ ನಗರದಲ್ಲಿ ಮಹಿಳಾ ಟೆಕ್ಕಿಯೊಬ್ಬರು ತನ್ನ 6 ತಿಂಗಳ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನ 6ನೇ ಮಹಡಿಯಿಂದ ಜಿಗಿದ ಪರಿಣಾಮ ಸ್ಥಳದಲ್ಲೇ ತಾಯಿ ಮೃತಪಟ್ಟಿದ್ದು, ಮಗು ಅದೃಷ್ಟವಶಾತ್ ಬದುಕುಳಿದಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಇಶಾ ಸಾಹು (37) ಎಂದು ಗುರುತಿಸಲಾಗಿದೆ. ಇಶಾ ತಮ್ಮ ಆರು ತಿಂಗಳ ಮಗುವನ್ನು ತೋಳಲ್ಲಿ ಹಿಡಿದುಕೊಂಡು ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಕೆಳಗೆ ಬೀಳುವ ವೇಳೆ ಮಗು ಅವರ ಕೈಯಿಂದ ಜಾರಿಬಿದ್ದ ಪರಿಣಾಮ ಗಂಭೀರ ಅಪಾಯದಿಂದ ಪಾರಾಗಿದ್ದು, ಸಣ್ಣ ಗಾಯಗಳೊಂದಿಗೆ ಬದುಕುಳಿದಿದೆ.
ಘಟನೆ ನಡೆದ ತಕ್ಷಣ ಸ್ಥಳೀಯ ನಿವಾಸಿಗಳು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಗೊಂಡ ಮಗುವನ್ನು ಕೂಡಲೇ ಕೆಪಿಎಚ್‌ಬಿಯಲ್ಲಿರುವ ಲೋಟಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.




