August 5, 2026

ಕಲ್ಲಡ್ಕ: ಅಲ್ ಬಿರ್ರ್ ಶಾಲೆಯ ನೂತನ ಕೊಠಡಿ ಮತ್ತು ಕಚೇರಿ ಉದ್ಘಾಟನೆ

0
IMG-20260612-WA0094

ಬಂಟ್ವಾಳ: ಕಲ್ಲಡ್ಕ ಅಲ್ ಬಿರ್ರ್ ಶಾಲೆಯ ನೂತನ ಕೊಠಡಿ ಹಾಗೂ ಕಛೇರಿ ಉದ್ಗಾಟನೆ ಕಲ್ಲಡ್ಕ ಮೊಹಿಯುದ್ದೀನ್ ಜೂಮಾ ಮಸೀದಿ ಇದರ ಅದೀನದಲ್ಲಿರುವ ಅಲ್ ಬಿರ್ರ್ ಶಾಲೆಯ ನೂತನ ಕೊಠಡಿ ಹಾಗೂ ಕಛೇರಿ ಉದ್ಗಾಟನೆ ಹಾಗೂ ಶಾಲಾ ಪ್ರಾರಂಭೊತ್ಸವ ಅಧ್ಯಕ್ಷರಾದ ಅಬ್ದುಲ್ಲಾ ಹಾಜಿ ಕೋಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಕೊಠಡಿಯ ಉದ್ಗಾಟನೆಯನ್ನು ಸೆಯ್ಯದ್ ಅಲೀ ಅಕ್ರಮ್ ತಂಗಲ್ ಬೋಳಿಯಾರು ಖತೀಬರು ನೆರವೆರಿಸಿ ನಂತರ ದುವಾ ಆಶಿರ್ವಚನಗೈದರು. ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬರಾದ ಸೈಯ್ಯದ್ ಅಲೀ ಮನ್ನಾನಿ ಸ್ವಾಗತಿಸಿ ಶುಭ ಹಾರೈಸಿದರು. ಮೋಹಿಯುದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಪನಾಮಾ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಅಭಿವೃದ್ದಿ ಪೋಷಕರ ಸಹಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅಥಿತಿಗಳಾಗಿ ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷರಾದ ಹನೀಫ್ ಹಾಜಿ ಗೊಳ್ತಮಜಲು, ಯುಸುಫ್ ಮುಂಡೋಳೆ ಸಂಪಾದಕರು ಅಲ್ ಬಿರ್ರ್ ಕಿಡ್ಸ್ ಮ್ಯಾಝಿನ್, ಉಮ್ಮರ್ ಶಾಫಿ ಪಾಪೆತಡ್ಕ, ಕಲ್ಲಡ್ಕ ಎಬ್ರಾಡ್ ಫಾರಂ ಇದರ ಅಧ್ಯಕ್ಷರಾದ ಫಿರೋಝ್ ಕಲ್ಲಡ್ಕ, ಆಯಿಶಾ ಇಬ್ರಾಹಿಂ ಇದರ ಅಧ್ಯಕ್ಷರಾದ UK ಶೇಕಬ್ಬ, M.J.M ಜೊತೆ ಕಾರ್ಯದರ್ಶಿ ಸಾದಿಕ್ ಮುಂತಾದ ಅನೇಕ ಗಣ್ಯರು ವೇದಿಕೆಯಲ್ಲಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.‌ ಮುನೀರುರ್ ಇಸ್ಲಾಂ ಮದ್ರಸ ಅಧ್ಯಾಪಕರಾದ ಪೈಝಲ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು. ಸದರ್ ಮುಅಲ್ಲಿಮ್ ಅಬ್ದುಲ್ ರಹ್ಮಾನ್ ಯಮಾನಿ ದನ್ಯವಾದ ಮಾಡಿದರು.

Leave a Reply

Your email address will not be published. Required fields are marked *

error: Content is protected !!