June 5, 2026

ಪುತ್ತೂರಿನ ಉದ್ಯಮಿ, ಎಸ್ ಡಿ ಪಿ ಐ ಮುಖಂಡ ಸಾಗರ್ ಇಬ್ರಾಹಿಂ ನಿಧನ

0
image_editor_output_image802790116-1780633949902

ಪುತ್ತೂರು: ಪುತ್ತೂರಿನ ಪ್ರಮುಖ ಉದ್ಯಮಿ ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳ ಮುಖಂಡರಾದ ಬೆದ್ರಾಳ ನಿವಾಸಿ ಸಾಗರ್ ಇಬ್ರಾಹಿಮ್ ಹಾಜಿ (ಸಾಗರ್ ಮೊಹಮ್ಮದ್ ಹಾಜಿ) ಅವರು ಇಂದು (ಜೂನ್ 5) ಮುಂಜಾನೆ ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೆಲವು ಸಮಯದಿಂದ ಅನಾರೋಗ್ಯ ಕಾಡುತ್ತಿತ್ತು. ಇಂದು ಮುಂಜಾನೆ ಸುಮಾರು 3:45ರ ವೇಳೆಗೆ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಗಣನೀಯ ಸಾಮಾಜಿಕ ಸೇವೆ: ಮೃತರು ಪುತ್ತೂರು ಪರಿಸರದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಪುತ್ತೂರಿನ ಬಡಕ್ಕೋಡಿ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ತಾಲೂಕು ಜಂಇಯ್ಯತ್ತುಲ್ ಫಲಾಹ್ ಸಮಿತಿಯ ಅಧ್ಯಕ್ಷರಾಗಿ, ಪುತ್ತೂರು ಎಸ್‌ಡಿಪಿಐ (SDPI) ಸಮಿತಿಯ ಅಧ್ಯಕ್ಷರಾಗಿ ಹಾಗೂ ಹಲವಾರು ಪ್ರಮುಖ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದರು.

ಕುಟುಂಬ: ಮೃತರು ಪುತ್ರ ಜಸೀನ್, ಸಹೋದರರಾದ ಮುಹಮ್ಮದ್, ಹಸೈನಾರ್ ಹಾಗೂ ಅಗಲಿದ ಸಹೋದರರಾದ ಮರ್ಹೂಮ್ ಯೂಸುಫ್ (ಮೋನುಚ್ಚ), ಮರ್ಹೂಮ್ ಉಮ್ಮರ್ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!