ಗೂನಡ್ಕ ಶಾಲೆಯಲ್ಲಿ 9 ವರ್ಷದ ಅಪ್ರಾಪ್ತ ಬಾಲಕನಿಗೆ ಶಾಲಾಡಳಿತ ಮಂಡಳಿಯ ಸದಸ್ಯನಿಂದ ಮಾರಣಾಂತಿಕ ಹಲ್ಲೆ:
ಎಸ್‌ಡಿಪಿಐ ಖಂಡನೆ
ಸುಳ್ಯ: ತಾಲೂಕಿನ ಗೂನಡ್ಕದ ಮಾರುತಿ ಇಂಟರ್ನ್ಯಾಷನಲ್ ಸ್ಕೂಲ್ ನ ಮೂರನೇ ತರಗತಿಯ ವಿಧ್ಯಾರ್ಥಿಗೆ ಶಾಲಾಡಳಿತ ಮಂಡಳಿಯ ಸದಸ್ಯ ಕಿಶೋರ್ ಎಂಬಾತ ಅಮಾನವೀಯ ರೀತಿಯಲ್ಲಿ ಮಾರಣಾಂತಿಕ ದೌರ್ಜನ್ಯ ವೆಸಗಿದ ಕೃತ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ತೀವ್ರವಾಗಿ ಖಂಡಿಸುತ್ತದೆ.
9 ವರ್ಷದ ಅಪ್ರಾಪ್ತ ಬಾಲಕನಿಗೆ ಶಾಲಾಡಳಿತ ಮಂಡಳಿಯ ಸದಸ್ಯ ಕಿಶೋರ್ ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ ಕೃತ್ಯವನ್ನು ಸಹಿಸಲು ಅಸಾಧ್ಯ, ಘಟನೆ ಬೆಳಕಿಗೆ ಬರುವಾಗಲೇ ಶಾಲಾಡಳಿತ ಮಂಡಳಿಯ ಸದಸ್ಯರು ಹಾಗೂ ಕೆಲವು ಸ್ಥಳೀಯ ರಾಜಕೀಯ ನಾಯಕರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ ಕೃತ್ಯ ಒಪ್ಪುವಂತದಲ್ಲ ಇದು ದೌರ್ಜನ್ಯ ವೆಸಗಿದವನಿಗೆ ಬೆಂಬಲ ನೀಡಿದಂತಾಗಿದೆ.
ಅದಲ್ಲದೇ ಇಂತಹ ಘಟನೆ ಈ ಹಿಂದೆಯೂ ಹಲವಾರು ಬಾರಿ ನಡೆದಿರುವ ಬಗ್ಗೆ ಮತ್ತು ಪೋಷಕರು ಹಾಗೂ ವಿಧ್ಯಾರ್ಥಿಗಳು ಭಯದಿಂದ ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂಬ ಬಗ್ಗೆಯೂ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಈ ಎಲ್ಲಾ ಘಟನೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಲಂಕುಷವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು.
ಹಾಗೂ ಸದ್ರಿ ಪ್ರಕರಣ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ದೌರ್ಜನ್ಯ ವೆಸಗಿದ ಆರೋಪಿ ಕಿಶೋರ್ ಎಂಬಾತನ ವಿರುದ್ಧ ಮತ್ತು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದವರ ವಿರುದ್ಧವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೋಲಿಸ್ ಇಲಾಖೆ ತನಿಖೆ ನಡೆಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.