ವಿಟ್ಲ: ಪ.ಪಂ ಚುನಾವಣೆ:
8ನೇ ವಾರ್ಡ್ ನಲ್ಲಿ ಕೇವಲ 13 ಮತಗಳ ಅಂತರದಲ್ಲಿ ಸೋತ ಎಸ್ ಡಿ ಪಿ ಐ ಅಭ್ಯರ್ಥಿ
ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಯ 8ನೇ ವಾರ್ಡ್ ನಲ್ಲಿ ಎಸ್ ಡಿ ಪಿ ಐ ಮತ್ತು ಬಿಜೆಪಿ ನಡುವೆ ನೇರಹಣಾಹಣಿ ನಡೆದಿದ್ದು, ಎಸ್ ಡಿ ಪಿ ಐ ಅಭ್ಯರ್ಥಿ ರಝೀಯಾ ಅವರು 12 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದು, ಕಾಂಗ್ರೆಸ್ ಮೂರನೇ ಸ್ಥಾನ ಪಡೆದುಕೊಡಿದೆ.
8ನೇ ವಾರ್ಡ್ ನಲ್ಲಿ ಬಿಜೆಪಿಯಿಂದ ಸುನೀತಾ, ಕಾಂಗ್ರೆಸ್ ನಿಂದ ಸುನೀತಾ ಕೋಟ್ಯಾನ್, ಮತ್ತು ಎಸ್ ಡಿಪಿಐ ನಿಂದ ರಝಿಯಾ ಅವರು ಕಣಕ್ಕೆ ಇಳಿದಿದ್ದರು.
ಇಲ್ಲಿ ಒಟ್ಟು 533 ಮತ ಚಲಾವಣೆಗೊಂಡಿದ್ದು, ಬಿಜೆಪಿ ಅಭ್ಯರ್ಥಿ 190, ಕಾಂಗ್ರೆಸ್ ಅಭ್ಯರ್ಥಿ 161, ಮತ್ತು ಎಸ್ ಡಿ ಪಿ ಐ ಅಭ್ಯರ್ಥಿ 177 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ವಿರುದ್ಧ ಎಸ್ ಡಿ ಪಿ ಐ ಅಭ್ಯರ್ಥಿ 13 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.





