ಸುಳ್ಯ: ಕಲ್ಲುಗುಂಡಿ ಕೂಲಿಶೆಡ್ ಸಮೀಪ ವ್ಯಕ್ತಿ ಕುಸಿದು ಬಿದ್ದು ಮೃತ್ಯು
ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಚಂದ್ರಹಾಸ 35 ವರ್ಷ ಎಂಬುವವರು ಡಿಸೆಂಬರ್ 29ರಂದು ಸಂಜೆ ಕೂಲಿಶೆಡ್ ಬಳಿ ಕುಸಿದು ಬಿದ್ದು ಮೃತರಾಗಿದ್ದಾರೆ.
ಇವರ ಅಂತಿಮ ವಿಧಿ ವಿಧಾನ ವನ್ನು ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅವರ ಸಹೋದರ ರವಿ, ಸ್ಥಳೀಯರಾದ ಬಾಬು ದೊಡ್ಡಡ್ಕ, ಗುರುವಪ್ಪ ಕಡೆಪಾಲ, ರಾಜೇಶ್ ವೆಲ್ಡಿಂಗ್ ಶಾಪ್ ಕೂಲಿಶೆಡ್, ಗ್ರಾಮ ಪಂಚಾಯತ್ ಸದಸ್ಯ, ಎಸ್. ಕೆ. ಹನೀಫ್, ಎಸ್ ಕೆ ಎಸ್ ಎಸ್ ಎಫ್ ಸಂಘಟನೆಯ ಮುಖಂಡ ತಾಜುದ್ದೀನ್ ಟರ್ಲಿ,ರಿಯಾಜ್ ಎಸ್. ಎ ಕಲ್ಲುಗುಂಡಿ ಸಹಕರಿಸಿದರು.
ಸಾರ್ವಜನಿಕ ಸ್ಮಶಾನದಲ್ಲಿ ಅಂತಿಮ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಮ್. ಶಹಿದ್, ಬಾಲಚಂದ್ರ ಕೊಡಪಾಲ ದಂಡೇಕಜೆ, ರಹೀಮ್ ಬೀಜದಕಟ್ಟೆ, ರೋಡಲ್ಪ್ ಕ್ರಸ್ತಾ, ರೋಯಲ್ ಕ್ರಸ್ತಾ ಪ್ರಸನ್ನ ಶಿವ ಚಂದ್ರ ಕಡೆಪಾಳ, ಡಾ. ಲೀಲಾದರ್, ದೀಕ್ಷಿತ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.