September 21, 2026

ಪುತ್ತೂರು: ಪತಿಯ ಮನೆಯಲ್ಲಿ ಆತ್ಮಹತ್ಯೆ

0
image_editor_output_image1047928668-1780058530548.jpg

ಪುತ್ತೂರು:ಕೆಯ್ಯರು ಸಣಂಗಳದ ಯುವ ಗೃಹಿಣಿಯೊಬ್ಬರು ಬೆಳ್ಳೂರು ಪಳ್ಳಪ್ಪಾಡಿಯಲ್ಲಿ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಪಳ್ಳಪ್ಪಾಡಿ ಜೈನುದ್ದೀನ್ ಎಂಬವರ ಪತ್ನಿ ಸೆರೀನಾ (27ವ.)ಎಂಬವರು ಗಂಡನ ಮನೆ ಸಮೀಪದ ಶೆಡ್ಡಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಕೆಯ್ಯರು ಗ್ರಾಮದ ಮಾಡಾವು ಸಣಂಗಳ ‘ಎಸ್‌ಎಸ್ ಮಂಝಿಲ್’ ದಿ.ಬಡುವನ್ ಕುಂ-ನಫೀಸಾ ದಂಪತಿ ಪುತ್ರಿ ಸ್ಟೋರೀನಾ ಅವರನ್ನು 2022ರ ಮೇ29ರಂದು ಮುಳ್ಳೇರಿಯಾ ಸಮೀಪದ ಪಳ್ಳಪ್ಪಾಡಿ ನಿವಾಸಿ ಜೈನುದ್ದೀನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು.

 

ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಆಕೆಗೆ ಪತಿ ಮನೆಯಲ್ಲಿ ಮಾನಸಿಕ, ದೈಹಿಕ ಕಿರುಕುಳ ನೀಡಲಾಗುತ್ತಿತ್ತು.ಅತ್ತೆಯ ಕಿರುಕುಳ ತಾಳಲಾಗದೆ ಸೆರೀನಾ ಅವರು ಹಲವು ಬಾರಿ ತವರಿಗೆ ಬಂದಿದ್ದರು.ಆ ಬಳಿಕ ಸಂಬಂಧಿಕರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆಸಿ ಪತಿ ಮನೆಗೆ ಕಳುಹಿಸಲಾಗಿತ್ತಾದರೂ ಕಿರುಕುಳ ಮುಂದುವರಿದಿತ್ತು ಎಂದು ಮೃತರ ಸಹೋದರ ಅಬ್ದುಲ್ ರೆಹಮಾನ್ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!