May 19, 2026

ಸುಳ್ಯ: ದೇವರಕೊಲ್ಲಿ ಬಳಿ ಸರಣಿ ಅಪಘಾತ: ಕಾರುಗಳು ಜಖಂ

0
image_editor_output_image-383015806-1779105220642.jpg

ಸುಳ್ಯ: ದೇವರಕೊಲ್ಲಿ ಬಳಿ 3 ಕಾರುಗಳ ನಡುವೆ ಸರಣಿ ಅಪಘಾತ ಉಂಟಾಗಿ ಕಾರುಗಳು ಜಖಂಗೊಂಡಿರುವ ಘಟನೆ ಸಂಭವಿಸಿದೆ.ಸುಳ್ಯ ಕಡೆಯಿಂದ ಮಡಿಕೇರಿಯತ್ತ ಹೋಗುತ್ತಿದ್ದ ಕಾರಿಗೆ ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಈ ಸಂದರ್ಭದಲ್ಲಿ ಚಾಲಕ ಬ್ರೇಕ್ ಹಾಕಿದಾಗ ಅದರ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಈ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.ಘಟನೆಯಲ್ಲಿ ಮೂರೂ ಕಾರುಗಳು ಜಖಂಗೊಂಡಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!