May 15, 2026

ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ಟಿಲ್ಲರ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾದ ಕಾರು

0
image_editor_output_image35013808-1778838021790.jpg

ವಿಟ್ಲ: ಮದುವೆ ಸಮಾರಂಭ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದಾಗ ಮುಂಜಾನೆ ಹೊತ್ತು ನಿದ್ದೆಯ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕ್ರೆಟಾ ಕಾರು ರಸ್ತೆ ಬದಿ ನಿಲ್ಲಿಸಿದ್ದ ಟಿಲ್ಲರ್‌ಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಘಟನೆ ವಿಟ್ಲದ ಚಂದಳಿಕೆ ಬಳಿ ನಡೆದಿದೆ.

ಕೇಪು ನಿವಾಸಿ ಅದ್ರಾಮ ಮತ್ತು ಮನೆಯವರು ತಮ್ಮ ಕ್ರೆಟಾ ಕಾರಿನಲ್ಲಿ ತುಮಕೂರಿನಲ್ಲಿ ನಡೆದ ಮದುವೆ ಸಮಾರಂಭ ಮುಗಿಸಿ ವಿಟ್ಲಕ್ಕೆ ಬರುತ್ತಿದ್ದರು. ಚಂದಳಿಕೆ ಎಂಬಲ್ಲಿ ಮುಂಜಾನೆ ವೇಳೆ ಚಾಲಕನಿಗೆ ನಿದ್ದೆ ಮಂಪರು ಆವರಿಸಿದ್ದು, ಕಾರು ನಿಯಂತ್ರಣ ತಪ್ಪಿ ಗುಜರಿ ವ್ಯಾಪಾರಿಯೊಬ್ಬ ಹಲವು ಸಮಯಗಳಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ.

ಅಪಘಾತದ ತೀವ್ರತೆಗೆ ಕ್ರೆಟಾ ಕಾರು ಭಾರಿ ಪ್ರಮಾಣದಲ್ಲಿ ಜಖಂಗೊಂಡಿದ್ದು, ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಎಂಜಿನ್ ಭಾಗ ಹೊರಗೆ ಬಂದಿದ್ದು, ಟೈರ್, ಬಂಪರ್ ಸೇರಿದಂತೆ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಟಿಲ್ಲರ್ ಕೂಡ ಪಲ್ಟಿಯಾಗಿ ನಜ್ಜುಗುಜ್ಜಾಗಿದೆ.

Leave a Reply

Your email address will not be published. Required fields are marked *

error: Content is protected !!