May 12, 2026

ವಿಟ್ಲ: 34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image1460566763-1778579070885.jpg

ವಿಟ್ಲ: 34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್‌ 14, 1992 ರಂದು ಕಾರೊಂದರಲ್ಲಿ ಅಕ್ರಮವಾಗಿ ಪೆಟ್ರೋಲ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿತರಾದ ಕಾಸರಗೋಡು ಮಂಜೇಶ್ವರ ನಿವಾಸಿ ಇಬ್ರಾಹಿಂ (28) ಹಾಗೂ ಸಿದ್ದೀಕ್ ಎಂಬವರುಗಳ ವಿರುದ್ದ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಅಕ್ರ: 124/1992 ಕಲಂ:3 ಮತ್ತು ಕಲಂ: 23 ಪೆಟ್ರೋಲಿಯಂ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿಗಳ ಪೈಕಿ ಸಿದ್ದೀಕ್ ಎಂಬಾತನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ.

ಆರೋಪಿ ಸಿದ್ದೀಕ್‌ನನ್ನು ಮೇ.11 2026 ರಂದು ರಾತ್ರಿ, ವಿಟ್ಲ ಠಾಣಾ ಪ್ರೊಬೇಶನರ್ ಪಿಎಸ್ಐ ಸಿದ್ದಪ್ಪ , ಎಎಸ್ಐ ಜಯರಾಮ್ , ಪಿಸಿ ಗೋಪಾಲ್ , ಪಿಸಿ ಯಂಕಪ್ಪ , ಪಿಸಿ ಶ್ರೀಶೈಲ್ ಜೋರಾಪುರ ರವರುಗಳ ತಂಡ ಕನ್ಯಾನ ಗ್ರಾಮದ ಕಬ್ಬಿನ ಮೂಲೆ ಎಂಬಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!