May 8, 2026

ಕೇರಳ: ನೂತನವಾಗಿ ಆಯ್ಕೆಯಾದ ಶಾಸಕಿಯನ್ನು ತಬ್ಬಿಕೊಳ್ಳಲು ಮುಂದಾದ ಕಾಂಗ್ರೆಸ್ ನಾಯಕ: ಜಾಲತಾಣದಲ್ಲಿ ಆಕ್ರೋಶ

0
is-he-sick-outrage-as-video-of-congress-leader-cherian-philip-forcefully-trying-to-hug-female-mla-goes-viral-1778150724896-1280x720.webp

ಕೇರಳ: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಪ್ರಧಾನ ಕಚೇರಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನೂತನವಾಗಿ ಆಯ್ಕೆಯಾದ ಕೊಲ್ಲಂ ಶಾಸಕಿ ಬಿಂದು ಕೃಷ್ಣ ಅವರಿಗೆ ಹಿರಿಯ ಕಾಂಗ್ರೆಸ್ ನಾಯಕ ಚೇರಿಯನ್ ಫಿಲಿಪ್ ಅವರು ಸಾರ್ವಜನಿಕವಾಗಿ ತಬ್ಬಿಕೊಳ್ಳಲು ಯತ್ನಿಸಿದ ಘಟನೆಯೊಂದು ನಡೆದಿದ್ದು, ಶಾಸಕಿ ನಿರಾಕರಿಸಿದರೂ ಕಾಂಗ್ರೆಸ್ ನಾಯಕ ಚೇರಿಯನ್ ಫಿಲಿಪ್ ಮಾತ್ರ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿರುವುದು ಪಕ್ಷದ ಮುಜುಗರಕ್ಕೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಕೊಲ್ಲಂ ಶಾಸಕಿ ಬಿಂದು ಕೃಷ್ಣ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಕಚೇರಿಗೆ ಆಗಮಿಸುವ ವೇಳೆ ಮಾಧ್ಯಮದವರಿಗೆ ಶುಭ ಕೋರುತ್ತಾ ಒಳಗೆ ನಡೆಯುತ್ತಿರುವ ಸಂದರ್ಭ ಅಲ್ಲಿದ್ದ ಕಾರ್ಯಕರ್ತರಿಗೆ ಹಸ್ತಲಾಘವ ಮಾಡುತ್ತಾ ಮುಂದೆ ಸಾಗುತ್ತಿರಬೇಕಾದರೆ ಹಿರಿಯ ನಾಯಕ ಚೆರಿಯನ್ ಫಿಲಿಪ್ ಎದುರಾಗಿದ್ದಾರೆ. ಈ ವೇಳೆ ಬಿಂದು ಅವರು ಕೈ ಮುಗಿದು ಹಸ್ತಲಾಘವ ಮಾಡಲು ಮುಂದಾಗಿದ್ದಾರೆ ಆದರೆ ಚೆರಿಯನ್ ಫಿಲಿಪ್ ಅವರು ಹಸ್ತಲಾಘವ ಮಾಡುವ ಬದಲು, ಬಿಂದು ಕೃಷ್ಣ ಅವರನ್ನು ತಬ್ಬಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಬಿಂದು ನಿರಾಕರಿಸಿದ್ದು ಆದರೂ ಚೆರಿಯನ್ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಕಾಂಗ್ರೆಸ್ ನಾಯಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!