May 5, 2026

ಶಾರ್ಜಾ-ದುಬೈಯಲ್ಲಿ ಕಾರು ಅಪಘಾತ: ಮೂಡುಬಿದಿರೆ ಮೂಲದ ಬಾಲಕಿ ಫಾತಿಮಾ ಅನಿಹಾ ಮೃತ್ಯು

0
image_editor_output_image827894892-1777968608565.jpg

ಮೂಡುಬಿದಿರೆ: ಶಾರ್ಜಾ-ದುಬೈ ಗಡಿಯಲ್ಲಿರುವ ಅನ್ಸಾರ್ ಮಾಲ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂಡುಬಿದಿರೆ ಸಮೀಪದ ಶಿರ್ತಾಡಿ ಮೂಲದ ಐದು ವರ್ಷದ ಬಾಲಕಿ ಫಾತಿಮಾ ಅನಿಹಾ ಸಾವನ್ನಪ್ಪಿದ್ದಾಳೆ. ಈಕೆ ಶಾರ್ಜಾದಲ್ಲಿ ಉದ್ಯೋಗದಲ್ಲಿರುವ ಹಕೀಮ್ ಮತ್ತು ಅವರ ಕುಟುಂಬದ ನಾಲ್ವರು ಮಕ್ಕಳಲ್ಲಿ ಕೊನೆಯವಳು.

ಭಾನುವಾರ ರಾತ್ರಿ ಕುಟುಂಬ ಸದಸ್ಯರೆಲ್ಲರೂ ಶಾಪಿಂಗ್ ಮುಗಿಸಿ ಮರಳುತ್ತಿದ್ದರು. ಅನ್ಸಾರ್ ಮಾಲ್ ಬಳಿ ನಿಲ್ಲಿಸಿದ್ದ ತಮ್ಮ ಕಾರಿನೊಳಗೆ ಕುಳಿತುಕೊಳ್ಳಲು ಸಿದ್ಧರಾಗುತ್ತಿದ್ದಾಗ, ಹಿಂದಿನಿಂದ ಅತಿ ವೇಗವಾಗಿ ಬಂದ ಮತ್ತೊಂದು ಕಾರು ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕಿ ಫಾತಿಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

Leave a Reply

Your email address will not be published. Required fields are marked *

error: Content is protected !!