ಕಾಂಗ್ರೆಸ್ ನಲ್ಲಿ ಮುಂದುವರಿದ ಮುಸ್ಲಿಂ ಮುಖಂಡರ ತಲೆದಂಡ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಸೈಯದ್ ಅಫ್ರೀದ್ ವಜಾ
ಕೋಲಾರ: ಕಾಂಗ್ರೆಸ್ ನಲ್ಲಿ ಮುಸ್ಲಿಂ ಮುಖಂಡರ ವಿರುದ್ಧದ ತಲೆದಂಡ ಮುಂದುವರಿದಿದೆ.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಸೈಯದ್ ಅಫ್ರೀದ್ ಅವರನ್ನು ವಜಾಗೊಳಿಸಲಾಗಿದೆ.
ಭಾರತೀಯ ಯುವ ಕಾಂಗ್ರೆಸ್ ಈ ಕ್ರಮ ವಹಿಸಿದೆ. ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯ ಕೊರತೆ, ಕಡ್ಡಾಯ ಸಭೆಗಳಿಗೆ ಹಾಜರಾತಿಯ ಅಭಾವ ಹಾಗೂ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವ ಕಾರಣ ನೀಡಲಾಗಿದೆ.
ಯುವ ಕಾಂಗ್ರೆಸ್ ರಾಜ್ಯ ನಾಯಕರಾದ ನಿಗಮ್ ಭಂಡಾರಿ, ಶ್ರೀನಿವಾಸ್ ರಾಥೋಡ್, ತಾರೀಕ್ ಬಾಗ್ವಾನ್ ಹಾಗೂ ಮಂಜುನಾಥ್ ಎಚ್.ಎಸ್ ಸಹಿ ಮಾಡಿ ಈ ಆದೇಶ ಹೊರಡಿಸಿದ್ದಾರೆ.





