ಮದುವೆ ಮನೆಯ ಡಿಜೆ ಸೌಂಡ್ ಗೆ 140 ಕೋಳಿಗಳು ಸಾವು: ಪೊಲೀಸರಿಗೆ ದೂರು ನೀಡಿದ ಮಾಲಕ
ಸುಲ್ತಾನ್‌ಪುರ(ಉತ್ತರ ಪ್ರದೇಶ): ರಾತ್ರಿ ಮದುವೆಯ ಮೆರವಣಿಗೆಯಲ್ಲಿ ಬಳಸಲಾದ ಡಿಜೆಯಿಂದ ಭಾರೀ ಜೋರಾದ ಸಂಗೀತ ಕೇಳಿ ಕೋಳಿ ಸಾಕಣೆ ಕೇಂದ್ರದಲ್ಲಿ 140 ಕೋಳಿಗಳು ಸಾವನ್ನಪ್ಪಿದ್ದು, ಮಾಲಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಏಪ್ರಿಲ್ 25 ರ ರಾತ್ರಿ, ಸ್ಥಳೀಯ ನಿವಾಸಿ ಬಬ್ಬನ್ ಎಂಬವರ ಪುತ್ರಿಯ ವಿವಾಹ ಮೆರವಣಿಗೆಯು ಕುದ್ವಾರ ಪ್ರದೇಶದ ರಾಮ ಭದ್ರ ಪೂರ್ವದಿಂದ ಬಂದಿದ್ದು, ಭಾರೀ ಸದ್ದಿನ ಡಿಜೆ ಒಳಗೊಂಡಿತ್ತು. ಗ್ರಾಮದ ಬಳಿ ಕೋಳಿ ಸಾಕಣೆ ಕೇಂದ್ರವನ್ನು ನಡೆಸುತ್ತಿರುವ ಸಬೀರ್ ಅಲಿ, ರಾತ್ರಿ 9:30 ರ ಸುಮಾರಿಗೆ ತಮ್ಮ ತೋಟದ ಮುಂದೆ ಮೆರವಣಿಗೆ ಹಾದು ಹೋಗಿತ್ತು, ಡಿಜೆಯಿಂದ ಬಂದ ಭಾರೀ ಶಬ್ದವು ಕೋಳಿಗಳಲ್ಲಿ ಭಯಭೀತತೆಯನ್ನು ಉಂಟುಮಾಡಿದೆ. ಶಬ್ದವನ್ನು ಸಹಿಸಲಾರದೆ 140 ಕೋಳಿಗಳು ಸಾವನ್ನಪ್ಪಿವೆ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ.
ದೂರಿನ ಮೇರೆಗೆ ಪೊಲೀಸರು ಪಾರ್ಸಿಪುರದ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಅನುಮತಿಸಲಾದ ಶಬ್ದ ಮಿತಿಗಳನ್ನು ಮೀರಿ ಕಾರ್ಯನಿರ್ವಹಿಸಿತ್ತೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೋಳಿಗಳ ನಷ್ಟಕ್ಕೆ ಶಬ್ದದ ಮಟ್ಟವು ಕಾರಣವಾಗಿದೆಯೇ ಎಂದು ನಿರ್ಧರಿಸಲು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.





