April 30, 2026

ಹಾಸನ | ನಾಲೆಗೆ ಬಿದ್ದ ಉರುಳಿ ಬಿದ್ದ ಸ್ವಿಫ್ಟ್ ಕಾರು: ಕಾರಿನಲ್ಲಿದ್ದ ತಾಯಿ, ಮಗ ಸ್ಥಳದಲ್ಲೇ ಸಾವು, ನಾಲ್ವರು ಗಂಭೀರ

0
image_editor_output_image1052934728-1777546600282.jpg

ಹಾಸನ: ಸ್ವಿಫ್ಟ್ ಕಾರೊಂದು ನಾಲೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ತಾಯಿ, ಮಗ ಸ್ಥಳದಲ್ಲೇ ಸಾವನ್ನಪ್ಪಿ, ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಮಲ್ಲನಘಟ್ಟ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಪ್ರಿಯಾಂಕ (30), ವೈಭವ್ (ಒಂದೂವರೆ ವರ್ಷ) ಎಂದು ಗುರುತಿಸಲಾಗಿದೆ. ಬೆಂಗಳೂರಿನ ದೇವನಹಳ್ಳಿಯ ನಿವಾಸಿಗಳಾದ ಮಂಜುನಾಥ್, ಪತ್ನಿ ಪ್ರಿಯಾಂಕ, ಪುತ್ರ ವೈಭವ್, ಸಂಬಂಧಿಗಳಾದ ಚಂದನ್, ದಿಲೀಪ್, ದೇವರಾಜು KA-02-MT-2690 ನಂಬರ್‌ನ ಸ್ವಿಫ್ಟ್ ಕಾರಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ವಾಪಾಸ್ ಆಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಕಾರು ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!