May 1, 2026

ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿತ: ಮೇ 4ರಿಂದ ಮಂಗಳೂರಿಗೆ ರೇಶನಿಂಗ್ ಮೂಲಕ ನೀರು ಸರಬರಾಜು

0
image_editor_output_image-186626642-1777607422926.jpg

ಮಂಗಳೂರು: ನಗರದಲ್ಲಿ ನೇತ್ರಾವತಿ ನದಿ ನೀರಿನ ಒಳಹರಿವು ಈಗಾಗಲೇ ನಿಂತಿದ್ದು, ಬಿರು ಬಿಸಿಲಿನಿಂದಾಗಿ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಈ ಬೇಸಿಗೆಯ ಅಂತ್ಯದವರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸುವ ನಿಟ್ಟಿನಲ್ಲಿ ಮೇ 4ರಿಂದ ರೇಶನಿಂಗ್ ಮೂಲಕ ನೀರು ಸರಬರಾಜು ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ರೇಶನಿಂಗ್ ವ್ಯವಸ್ಥೆಯ ಮೂಲ ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರು ನಗರ ಉತ್ತರ ಭಾಗಕ್ಕೆ ಪರ್ಯಾಯ ದಿನಗಳಲ್ಲಿ (2 ದಿನಗಳಿಗೊಮ್ಮೆ) ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅದರಂತೆ ಮೇ 4ರಂದು ಬೆಂದೂರು ರೇಚಕ ಸ್ಥಾವರದಿಂದ ಕೋರ್ಟ್ ವಾರ್ಡ್, ಕಾರ್ ಸ್ಟ್ರೀಟ್, ಬಾವುಟಗುಡ್ಡ ಟ್ಯಾಂಕ್, ಆಕಾಶವಾಣಿ, ಪದವು, ಗೋರಿಗುಡ್ಡ, ಸೂಟರ್ ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್‌ಲೇನ್, ಬೆಂದೂರು, ಲೋಲೆವೆಲ್ ಪ್ರದೇಶಗಳು, ಬೋಳೂರು ಪ್ರದೇಶ. ಪಡೀಲ್ ರೇಚಕ ಸ್ಥಾವರದಿಂದ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸನಗರ, ಬಜಾಲ್, ತಿರುವೈಲು, ವಾಮಂಜೂರು.

ಶಕ್ತಿನಗರ ಟ್ಯಾಂಕ್‌ನಿಂದ ಕುಂಜತ್ತಬೈಲ್, ಮುಗ್ರೋಡಿ, ಶಕ್ತಿನಗರ, ಸಂಜಯ ನಗರ, ಪ್ರೀತಿ ನಗರ, ಮಂಡ್ಕ, ರಾಜೀವ ನಗರ, ಬೊಂದೇಲ್, ಗಾಂಧಿನಗರ, ಶಾಂತಿನಗರ ಕಾವೂರು.

ತುಂಬೆ- ಪಣಂಬೂರು ನೇರ ಲೈನ್‌ನಿಂದ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಲ್ಲೂರು ಗುಡ್ಡೆ, ಪಡೀಲ್‌ಗೆ ನೀರು ಪೂರೈಕೆ ಮಾಡಲಾಗುತ್ತದೆ.

ಮೇ 5ರಂದು ಪಣಂಬೂರು ರೇಚಕ ಸ್ಥಾವರದಿಂದ ಸುರತ್ಕಲ್, ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ.

ಪಡೀಲ್ ರೇಚಕ ಸ್ಥಾವರದಿಂದ ಬಜಾಲ್, ಜಲ್ಲಿಗುಡ್ಡೆ, ಮುಗೇರ್, ಎಕ್ಕೂರು, ಸದಾಶಿವನಗರ, ಅಳಪೆ, ಮೇಘನಗರ, ಮಂಜಳಿಕೆ, ಕಂಕನಾಡಿ ರೈಲ್ವೇ ಸ್ಟೇಷನ್ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್‌ಬ್ಯಾಂಕ್, ಗೂಡ್‌ಶೆಡ್, ಧಕ್ಕೆ, ಕಣ್ಣೂರು, ನಿಡ್ಡೆಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರ ನಗರ.

ಶಕ್ತಿನಗರ ಟ್ಯಾಂಕ್‌ನಿಂದ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರು ಮಠ, ಪ್ರಶಾಂತ ನಗರ.

ತುಂಬೆ ಪಣಂಬೂರು ನೇರ ಲೈನ್‌ನಿಂದ ಮೂಡ ಪಂಪ್ ಹೌಸ್, ಕೊಟ್ಟಾರ ಚೌಕಿ ಪಂಪ್‌ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕಾಡ್, ದಡ್ಡಲ್‌ಕಾಡ್ ಪ್ರದೇಶ, ಬಂಗ್ರ ಕೂಳೂರು ಈ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಇದೇ ರೀತಿಯಾಗಿ ಪರ್ಯಾಯ ದಿನಗಳಲ್ಲಿ ನೀರು ಪೂರೈಕೆ ಮುಂದುವರಿಯಲಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಕಟ್ಟಡ ರಚನೆ, ಇತರ ನಿರ್ಮಾಣ ಕಾಮಗಾರಿ ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್‌ಗಳ ಜೋಡೆಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸಲಾಗುವುದು. ಸಾರ್ವಜನಿಕರು ಅನಗತ್ಯವಾಗಿ ನೀರು ಪೋಲು ಮಾಡುವುದು ಕಂಡು ಬಂದರೆ ಸೂಚನೆ ನೀಡದೆ ಜೋಡಣೆ ಕಡಿತಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ನೀರಿನ ಸಮಸ್ಯೆ ಬಂದರೆ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

*ಪಡೀಲ್ ರೇಚಕ ಸ್ಥಾವರ- 0824-2230840

*ಬೆಂದೂರ್ ರೇಚಕ ಸ್ಥಾವರ- 0824-2220303, 2220362

*ಪಣಂಬೂರು ರೇಚಕ ಸ್ಥಾವರ- 0824- 2220364

*ಮನಪಾ ವಾಟ್ಸಾಪ್- 9449007722

*ಮನಪಾ ಕಂಟ್ರೋಲ್ ರೂಂ- 0824- 2220319

Leave a Reply

Your email address will not be published. Required fields are marked *

You may have missed

error: Content is protected !!