April 28, 2026

ಕಲ್ಲಂಗಡಿ ಹಣ್ಣು ಸೇವಿಸಿ ರಾತ್ರಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಸಾವು

0
image_editor_output_image-1901291354-1777355779899.jpg

ಮುಂಬೈ: ಇಲ್ಲಿನ ಪೈಧೋನಿ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ವರು ಫುಡ್‌ ಪಾಯಿಸನ್‌ನಿಂದ ಸಾವನ್ನಪ್ಪಿದ್ದಾರೆ.

ಮೃತರನ್ನು ಅಬ್ದುಲ್ಲಾ ದೋಕಾಡಿಯಾ (40), ನಸ್ರೀನ್ ದೋಕಾಡಿಯಾ (35) ಮತ್ತು ಅವರ ಹೆಣ್ಣುಮಕ್ಕಳಾದ ಆಯಿಷಾ (16) ಮತ್ತು ಜೈನಾಬ್ (13) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಹೇಳಿಕೆಗಳ ಪ್ರಕಾರ, ಅವರೆಲ್ಲ ಬಿರಿಯಾನಿ ಸೇವಿಸಿ, ನಂತರ ಕಲ್ಲಂಗಡಿ ಹಣ್ಣು ತಿಂದಿದ್ದರು ಎಂದು ತಿಳಿದುಬಂದಿದೆ.

ಏ.ರ ರಾತ್ರಿ ಸುಮಾರು 10:30ಕ್ಕೆ ಸಂಬಂಧಿಗಳು ಸೇರಿದಂತೆ ಒಟ್ಟು ಒಂಬತ್ತು ಕುಟುಂಬ ಸದಸ್ಯರು ಒಟ್ಟಿಗೆ ಊಟ ಮಾಡಿದ್ದರು. ನಂತರ ಸಂಬಂಧಿಕರು ತಮ್ಮ ಮನೆಗಳಿಗೆ ಮರಳಿದ್ದರು. ನಡುರಾತ್ರಿ 1:00 ರಿಂದ 1:30ರ ನಡುವೆ, ನಾಲ್ವರು ಕುಟುಂಬದ ಸದಸ್ಯರು ಕಲ್ಲಂಗಡಿ ಹಣ್ಣು ಸೇವಿಸಿದ್ದರು ಎನ್ನಲಾಗಿದೆ.

ಏ.26 ರಂದು ಮುಂಜಾನೆ ಸುಮಾರು 5:30 ರಿಂದ 6:00 ರವರೆಗೆ, ನಾಲ್ವರಿಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಅವರಿಗೆ ಆರಂಭದಲ್ಲಿ ಕುಟುಂಬದ ವೈದ್ಯರು ಚಿಕಿತ್ಸೆ ನೀಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಅವರೆಲ್ಲ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!