April 23, 2026

ಪತ್ನಿಯನ್ನು ಕೊಲೆ ಮಾಡಿ ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆ

0
image_editor_output_image-477947028-1776934042796.jpg

ಬೆಂಗಳೂರು: ಕೌಟುಂಬಿಕ ವಿಚಾರವಾಗಿ ಪತ್ನಿಯನ್ನು ಕೊಲೆ ಮಾಡಿ ಬಳಿಕ ಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌.ಟಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಸುಮಿತ್ರಾ ಹಾಗೂ ಡೇವಿಡ್ ಎಂದು ಗುರುತಿಸಲಾಗಿದೆ.

ಮೃತ ಸುಮಿತ್ರಾ ಮತ್ತು ಡೇವಿಡ್ ಕಳೆದ ಒಂದು ದಶಕದಿಂದ ಗಂಗೇನಹಳ್ಳಿಯ ಮನೆಯೊಂದರಲ್ಲಿ ವಾಸವಿದ್ದರು. ಇತ್ತೀಚಿನ ದಿನಗಳಲ್ಲಿ ಇವರ ನಡುವೆ ಪದೇ ಪದೇ ಕೌಟುಂಬಿಕ ಕಲಹಗಳು ಏರ್ಪಡುತ್ತಿದ್ದವು ಎನ್ನಲಾಗಿದೆ. ಬುಧವಾರ ಸಂಜೆ ದಂಪತಿಗಳ ನಡುವೆ ಜಗಳ ವಿಕೋಪಕ್ಕೆ ಹೋಗಿದ್ದು, ಈ ವೇಳೆ ಆಕ್ರೋಶಗೊಂಡ ಡೇವಿಡ್, ಪತ್ನಿ ಸುಮಿತ್ರಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಬಳಿಕ ತಾನೂ ಸಹ ಅದೇ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಬಿ.ಎಸ್. ನೇಮಗೌಡ ಅವರು, “ಪ್ರಾಥಮಿಕ ಮಾಹಿತಿ ಪ್ರಕಾರ ದಂಪತಿಗಳ ನಡುವೆ ಜಗಳವಾಗುತ್ತಿತ್ತು. ಘಟನೆ ನಡೆದ ದಿನ ಜಗಳ ಜೋರಾಗಿದ್ದರಿಂದ ಮಕ್ಕಳನ್ನು ಸೋದರ ಸಂಬಂಧಿಯೊಬ್ಬರು ತಮ್ಮ ಮನೆಗೆ ಕರೆದೊಯ್ದಿದ್ದರು. ಮಕ್ಕಳಿಲ್ಲದ ಸಮಯದಲ್ಲಿ ಈ ದುರಂತ ನಡೆದಿದೆ.

Leave a Reply

Your email address will not be published. Required fields are marked *

error: Content is protected !!